Hubli News: ತೀವ್ರ ಸ್ವರೂಪ ಪಡೆದುಕೊಂಡ ರೈತ ಹೋರಾಟ: ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ..!

Hubli News: ಹುಬ್ಬಳ್ಳಿ: ‘ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡದೇ ಮತ್ತಷ್ಟು ಕಾಲಹರಣ ಮಾಡಿದ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಕರೆ ನೀಡಿರುವ ಹೋರಾಟ ಕ್ಷಣದಿಂದ ಕ್ಷಣಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಹುಬ್ಬಳ್ಳಿಯ ಗಬ್ಬೂರಿನ ರಾಷ್ಟ್ರೀಯ ಹೆದ್ದಾರಿಯಿಂದ ಈಗ ಅದರಗುಂಚಿ ಕ್ರಾಸ್ ನಲ್ಲಿ ಬೃಹತ್ ಹೋರಾಟ ಮಾಡುವ ಮೂಲಕ ಅನ್ನದಾತ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆ ವತಿಯಿಂದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ, ಪ್ರತಿಭಟನೆ ನಡೆಸಿದರು. ಹೌದು.. ಚಕ್ಕಡಿಯ ಮೂಲಕ ಹೋರಾಟಕ್ಕೆ ಆಗಮಿಸಿದ ರೈತರು ಬ್ಯಾರಿಕೇಡ್ ಹಾಗೂ ಕಲ್ಲನ್ನು ರಸ್ತೆಗೆ ಇಟ್ಟು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಅವರು ರೈತರನ್ನು ದೆಹಲಿಗೆ ಕರೆಸಿಕೊಂಡು ಬೇಡಿಕೆ ಈಡೇರಿಸದೆ ರೈತರನ್ನು ಅವಮಾನಿಸಿದ್ದಾರೆ. ಮಾತುಕತೆ ಹೆಸರಿನಲ್ಲಿ ಇನ್ನಷ್ಟು ಕಾಲ ದೂಡುವುದನ್ನು ಸಹಿಸುವುದಿಲ್ಲ. ‘ರೈತರಿಗೆ ನೀಡಿದ ಭರವಸೆ ಉಳಿಸಿಕೊಳ್ಳಲು ಕೇಂದ್ರ ವಿಫಲವಾಗಿದೆ. ಇದನ್ನು ಖಂಡಿಸಿ ಕರ್ನಾಟಕ ಮತ್ತು ಮಹಾರಾಷ್ಟ್ರದ ರೈತರು ಒಗ್ಗಟ್ಟಾಗಿ ಹೋರಾಟ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

About The Author