ನಾನು ಬಾಯಿ ಬಿಟ್ರೆ ಮತ್ತೆ ಓಪನ್ ಹಾರ್ಟ್ ಸರ್ಜರಿ ಮಾಡಿಸಬೇಕಾಗತ್ತೆ: ಕುಮಾರಸ್ವಾಮಿಗೆ ಪ್ರಿಯಾಂಕ್ ಟಾಂಗ್

Political News: ರಾಜ್ಯ ರಾಜಕಾರಣದಲ್ಲಿ ಸದ್ಯ ಸ್ಟಿಂಗ್ ಆಪರೇಷನ್‌ನದ್ದೇ ಚರ್ಚೆ ನಡೀತಿದೆ. ಅದರಲ್ಲೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ತೀವ್ರ ಮಾತಿನ ಚಕಮಕಿ ನಡೆಯುತ್ತಿದೆ. ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿರುವ ಪ್ರಿಯಾಂಕ್- ಹೆಚ್ಡಿಕೆ ಸವಾಲ್ ಕೂಡ ಹಾಕುತ್ತಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿರುವ ಪ್ರಿಯಾಂಕ್ ಖರ್ಗೆ, ಕುಮಾರಸ್ವಾಮಿ ಅವರು ಏಕವಚನದಲ್ಲಿ ಮಾತನಾಡಿದ ಕ್ಷಣ ನಾವು ಹೆದರಿಕ“ಳ್ಳುತ್ತೇವೆ. ನಮ್ಮನ್ನು ಹೆದರಿಸಬಹುದು, ಬೆದರಿಸಬಹುದು ಅಂದುಕ“ಂಡಿದ್ದರೆ ಅದು ನಿಮ್ಮ ಭ್ರಮೆ. ನೀವು ಗೌರವ ನೀಡಿದರೆ, ನಾವೂ ಗೌರವ ನೀಡಿ ಮಾತನಾಡುತ್ತೇವೆ. ಆದರೆ ಅವರು ನಮಗೆ ಯಾವ ಭಾಷೆಯಲ್ಲಿ ಮಾತನಾಡುತ್ತಾರೋ, ಅದೇ ಭಾಷೆಯಲ್ಲಿ ನಮಗೂ ಉತ್ತರ ನೀಡಲು ಬರುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಅಲ್ಲದೇ ಹೆಚ್ಡಿಕೆ ವಾಗ್ದಾಳಿ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ನಾನು ಮಾತನಾಡಲು ಶುರು ಮಾಡಿದ್ರೆ, ಕುಮಾರಸ್ವಾಮಿಗೆ ಇನ್ನ“ಮ್ಮೆ ಓಪನ್ ಹಾರ್ಟ್ ಸರ್ಜರಿ ನಡೆಯುತ್ತದೆ ಎಂದು ಟೀಕಿಸಿದ್ದಾರೆ. ನೀವು ಕೇಂದ್ರ ಸಚಿವ ಸ್ಥಾನದಲ್ಲಿದ್ದೀರಿ. ನಿಮಗೆ ವಯಸ್ಸಾಗಿದೆ. ನಿಮ್ಮ ನಾಲಿಗೆಯ ಮೇಲೆ ಹಿಡಿತವಿರಲಿ. ನಾವು ನಿಮ್ಮ ಲೆವಲ್‌ಗೆ ಇಳಿಯಲು ಸಾಧ್ಯವಿಲ್ಲ. ನಮ್ಮ ಅಪ್ಪನ ಬಗ್ಗೆ ಮಾತನಾಡಲು ಬಂದರೆ, ನಾವೂ ಅದೇ ರೀತಿ ಪ್ರತಿಕ್ರಿಯಿಸಬೇಕಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.

About The Author