Haveri News: ಹಾವೇರಿ: ವಿಧಾನಸಭೆ ಚುನಾವಣೆಗೆ ಇನ್ನೂ 1 ವರ್ಷಕ್ಕೂ ಮಿಕ್ಕಿ ಸಮಯ ಬಾಕಿ ಇದೆ. ಆದರೆ ಹಾವೇರಿಯಲ್ಲಿ ಈಗಿನಿಂದಲೇ ಚುನಾವಣೆಗೆ ತಯಾರಿ ನಡೆದಿದೆ.
ಹಾವೇರಿಯ ಬ್ಯಾಡಗಿಯಲ್ಲಿ ಪಕ್ಷಗಳ ಅಭ್ಯರ್ಥಿ ಘೋಷಣೆ ಆಗುವ ಮುನ್ನವೇ ಪಕ್ಷೇತರ ಅಭ್ಯರ್ಥಿ ಎಂಟ್ರಿಯಾಗಿದ್ದಾರೆ. ಬ್ಯಾಡಗಿ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಉಮೇಶ್ ಕರಿಗಾರ್ ಸಿದ್ಧತೆ ನಡೆಸಿದ್ದಾರೆ.
ತಿಮಾಕಾಪೂರ ಗ್ರಾಮದಲ್ಲಿ ಉಮೇಶ್ ಕರಿಗಾರ್ ಅವರು ಬೀರಲಿಂಗೇಶ್ವರ ದೇವಸ್ಥಾನಕ್ಕೆ ದೇಣಿಗೆ ನೀಡಿ ಚುನಾವಣಾ ಅಖಾಡಕ್ಕೆ ಎಂಟ್ರಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಉಮೇಶ್, ಬ್ಯಾಡಗಿ ಕ್ಷೇತ್ರದಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ . ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ರಾಜಕಾರಣಿ ಕ್ಷೇತ್ರಕ್ಕೆ ಬೇಕು.
ದೇವಸ್ಥಾನಗಳ ಜೀರ್ಣೋದ್ಧಾರ, ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷದವರು ನನ್ನ ಸಂಪರ್ಕ ಮಾಡಿದ್ದರು. ಈ ಬಾರಿ ಪಕ್ಷ ನೋಡಿ ಮತ ಹಾಕಲ್ಲ, ನನ್ನ ಸೇವೆ ನೋಡಿ ಮತ ಹಾಕ್ತಾರೆ. ಜನರ ಸೇವೆಯೇ ನನ್ನ ರಾಜಕೀಯದ ಅಜೆಂಡಾ ಎಂದು ಉಮೇಶ್ ಕರಿಗಾರ್ ಹೇಳಿದ್ದಾರೆ.




