Political News: ರಾಜ್ಯದಲ್ಲಿ ಹಾಲು, ಬಸ್ ಪ್ರಯಾಣ ದರ, ದಿನಸಿ ಸೇರಿ ಹಲವು ದರ ಏರಿಕೆಯ ಬಗ್ಗೆ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡೀಸೆಲ್‌ಗೂ ಕಾಸಿಲ್ಲ’ ಎಂದು ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದೀರಾ ಮುಖ್ಯಮಂತ್ರಿಗಳೇ? ಹಾಲು – ಮೊಸರನ್ನು ದುಬಾರಿಯಾಗಿಸಿದ ರಾಜ್ಯ ಸರ್ಕಾರ ಮಧ್ಯಮ ವರ್ಗದ ಸುಲಿಗೆಗೆ ಬಸ್ ಪ್ರಯಾಣ ದರವನ್ನೂ ಹೆಚ್ಚಿಸುತ್ತಿದೆ. ಹಾಲಿನ ದರ, ಮೊಸರಿನ ದರವನ್ನು ಏರಿಕೆ ಮಾಡಿ ಕನ್ನಡಿಗರನ್ನು ಸುಲಿಗೆ ನಡೆಸುತ್ತಿರುವ ರಾಜ್ಯ ಸರ್ಕಾರ, ನವೆಂಬರ್ 5ರಿಂದ ಬಸ್ ಪ್ರಯಾಣ ದರವನ್ನೂ ಹೆಚ್ಚಿಸುತ್ತಿದೆ. ಜನಪರ ಆಡಳಿತ ಎನ್ನುವ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡುವುದೇ ಕಾಂಗ್ರೆಸ್ ನೀತಿ. ಮಹಿಳೆಯರಿಗೆ ಉಚಿತ ಪ್ರಯಾಣ ಎನ್ನುತ್ತಾ, ಅವರ ಮನೆಯ ಪುರುಷರಿಂದ ದುಪ್ಪಟ್ಟು ಹಣ ವಸೂಲಿಗೆ ಸರ್ಕಾರ ನಿಂತಿದೆ.
ಅವೈಜ್ಞಾನಿಕ ಗ್ಯಾರಂಟಿಗಳನ್ನು ಕಾಂಗ್ರೆಸ್ ಜಾರಿಗೆ ಬಂದ ತಪ್ಪಿಗೆ ಕನ್ನಡಿಗರು ಏಕೆ ಬೆಲೆ ತೆರಬೇಕು? ಯಾವೊಂದರ ದರವನ್ನೂ ಬಿಡದೆ ಈ ಸರ್ಕಾರ ದರ ಹೆಚ್ಚಿಸಿದೆ. ಸಾರಿಗೆ ನಿಗಮಗಳು 9,000 ಕೋಟಿ ರೂಪಾಯಿ ನಷ್ಟದಲ್ಲಿವೆ. ಹೊಸ ಬಸ್‌ಗಳನ್ನು ಖರೀದಿಸಲು ನಿಗಮದ ಬಳಿ ಹಣವಿಲ್ಲ ಎಂದು ರವಿ ಆರೋಪಿಸಿದ್ದಾರೆ.
ಇರುವ ಬಸ್‌ಗಳಿಗೆ ಡೀಸೆಲ್ ಹಾಕಿಸಲು ಕಾಸಿಲ್ಲ ಎಂದು ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಹಿರಂಗವಾಗಿಯೇ ಹೇಳಿದ್ದಾರೆ. ಮಧ್ಯಮ ವರ್ಗದ ಸುಲಿಗೆ ನಡೆಸುವ ಬಸ್ ಪ್ರಯಾಣ ದರ ಏರಿಕೆಯನ್ನು ಸರ್ಕಾರ ತಕ್ಷಣವೇ ಕೈ ಬಿಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ನಡೆಸಿ ಸರ್ಕಾರಕ್ಕೆ ಬುದ್ಧಿ ಕಲಿಸಬೇಕಾಗುತ್ತದೆ ಎಂದು ರವಿ ಎಚ್ಚರಿಕೆ ನೀಡಿದ್ದಾರೆ.




