Political News: ರಾಜ್ಯಾದ್ಯಂತ ಹಾಫ್ ಹೆಲ್ಮೆಟ್ ಬ್ಯಾನ್: ಸಚಿವ ಭೈರತಿ ಸುರೇಶ್

Political News: ರಾಜ್ಯದಲ್ಲಿ ಅರ್ಧ ಹೆಲ್ಮೆಟ್ ಬ್ಯಾನ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಅರ್ಧ ಹೆಲ್ಮೆಟ್ ಬಳಸುವುದರಿಂದ ಅಪಘಾತದ ಸಂದರ್ಭದಲ್ಲಿ ಪೆಟ್ಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಅರ್ಧ ಹೆಲ್ಮೆಟ್ ಧರಿಸಿದರೂ ಅದು ನಿಷ್ಪ್ರಯೋಜಕ. ಹಾಗಾಗಿ ಅರ್ಧ ಹೆಲ್ಮೆಟ್‌ನ್ನು ಸಂಪೂರ್ಣವಾಗಿ ರಾಜ್ಯದಲ್ಲಿ ಬ್ಯಾನ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಅಷ್ಟೇ ಅಲ್ಲದೇ, ಅರ್ಧ ಹೆಲ್ಮೆಟ್ ತಯಾರಿ ಘಟಕದ ಮೇಲೂ ನಿರ್ಬಂಧ ಹೇರಲು ರಾಜ್ಯ ಸರ್ಕಾರ ಮುಂದಾಗಿದೆ. ಬೆಂಗಳೂರಿನಲ್ಲಿ ಇಂದು ಪ್ರೆಸ್‌ಮೀಟ್ ನಡೆಸಿ ಮಾತನಾಡಿರುವ ಸಚಿವ ಭೈರತಿ ಸುರೇಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದಿನ ವರ್ಷ ಅಂದರೆ 2027ರ ಜನವರಿ 1ರಿಂದಲೇ ಹಾಫ್ ಹೆಲ್ಮೆಟ್ ರಾಜ್ಯಾದ್ಯಂತ ಬ್ಯಾನ್ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಈ ನಿಯಮ ಜಾರಿಯಾದರೆ, ಪೂರ್ಣವಾಗಿ ಹೆಲ್ಮೆಟ್ ಧರಿಸಲಬೇಕಾಗುತ್ತದೆ. ಅಲ್ಲದೇ ಅಪಘಾತವಾದರೂ, ಈ ನಿಯಮ ಜಾರಿಯಾಗುವುದರಿಂದ ಸಾವು ನೋವಿನ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

About The Author