Andhra Pradesh News: ಉಪನ್ಯಾಸಕರ“ಬ್ಬರು ರಸ್ತೆಯಲ್ಲಿ ಸಿಕ್ಕ ಸುಮಾರು 5 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನದ ಬಳೆಗಳನ್ನು ಹತ್ತಿರದ ಪೋಲೀಸ್ ಠಾಣೆಗೆ ನೀಡಿ, ಪ್ರಾಮಾಣಿಕತೆ ಮೆರೆದಿದ್ದಾರೆ.
ಆಂಧ್ರಪ್ರದೇಶದ ಕಾಕಿನಾಡ ಕಾಲೇಜಿನ ಉಪನ್ಯಾಸಕರಾದ ಸತೀಶ್ ಎಂಬುವವರು, ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಅವರಿಗೆ ರಸ್ತೆಯಲ್ಲಿ 5 ಲಕ್ಷ ಬೆಲೆ ಬಾಳುವ ಚಿನ್ನದ ಬಳೆ ಸಿಕ್ಕಿದೆ. ಅದನ್ನು ಸ್ಥಳೀಯ ಠಾಣೆಗೆ ಹೋಗಿ, ಅಲ್ಲಿನ ಎಸ್ಪಿ ಬಿಂದು ಮಾಧವ್ ಎಂಬುವವರಿಗೆ ನೀಡಿ, ಪ್ರಾಮಾಣಿಕತೆ ಮೆರೆದಿದ್ದಾರೆ.
ಉಪನ್ಯಾಸಕರ ಕೆಲಸಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಯಂತಿ ಎಂಬುವವರಿಗೆ ಸೇರಿದ ಬಳೆ ಇದಾಗಿದ್ದು, ಅವರು ಅದಾಗಲೇ ಬಳೆ ಕಳೆದು ಹೋಗಿದೆ ಎಂದು ದೂರು ನೀೠಡಿದ್ದರು. ಹಾಗಾಗಿ ಬಿಂದು ಮಾಧವ ಅವರು ಜಯಂತಿ ಅವರನ್ನು ಸಂಪರ್ಕಿಸಿ, ಅವರ ಬಳೆಯನ್ನು ಹಿಂದಿರುಗಿಸಿದ್ದಾರೆ.
ಇಂದಿನ ಕಾಲದಲ್ಲಿ ಚಿನ್ನ ಸಿಕ್ಕರೆ, ಅದನ್ನು ಯಾರಿಗೂ ನೀಡದೇ, ತಮ್ಮ ಬಳಿಯೇ ಇರಿಸಿಕ“ಳ್ಳುವವರ ಮಧ್ಯೆ ಸತೀಶ್ ಅವರು ಪ್ರಾಮಾಣಿಕತೆ ಮೆರೆದು, ಹಲವರಿಗೆ ಮಾದರಿಯಾಗಿದ್ದಾರೆ.




