Uttara Pradesh: ಮನುಷ್ಯ ಸಾವನ್ನಪ್ಪಿದ ಮೇಲೆ 13ನೇ ದಿನಕ್ಕೆ ಪಿತೃ ಕಾರ್ಯ ನಡೆಸಲಾಗುತ್ತದೆ. ಆದರೆ ಇಲ್ಲೋರ್ವ ವ್ಯಕ್ತಿ ತಾನು ಬದುಕಿದ್ದಾಗಲೇ ತನ್ನ 13ನೇ ದಿನದ ಕಾರ್ಯ ಮಾಡಿಸಿದ್ದು, ಬಂದ ಅತಿಥಿಗಳನ್ನು ತಾನೇ ಸ್ವಾಗತಿಸಿದ್ದಾನೆ. ಇದು ಆ ವ್ಯಕ್ತಿಯೇ ತೆಗೆದುಕ“ಂಡಿರುವ ನಿರ್ಧಾರವಾಗಿದೆ. 900 ಮಂದಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ಉತ್ತಕಪ್ರದೇಶದ ಬಾಗಪತ್ ಜಿಲ್ಲೆಯ ಜೋಹ್ರಿಯಲ್ಲಿ ಈ ಘಟನೆ ನಡೆದಿದ್ದು, ಚೌಧರಿ ಬಲ್ಜೋರ್ ಸಿಂಗ್ ಈ ನಿರ್ಧಾರ ತೆಗೆದುಕ“ಂಡ ವ್ಯಕ್ತಿಯಾಗಿದ್ದಾರೆ. ಯಾಕೆ ಈ ನಿರ್ಧಾರ ತೆಗೆದುಕ“ಂಡಿದ್ದಾರೆ ಎಂದರೆ, ತಾನು ಸತ್ತ ಬಳಿಕ 13ನೇ ಕಾರ್ಯ ಮಾಡುವ ಬದಲು, ಬದುಕಿದ್ದಾಗಲೇ ತಮ್ಮವರ ಜತೆ ಸಮಯ ಕಳೆಯಬೇಕು ಎಂಬ ಆಸೆಯಿಂದ ಈ ನಿರ್ಧಾರ ತೆಗೆದುಕ“ಂಡಿದ್ದಾರಂತೆ.
ಅಲ್ಲದೇ ತಮ್ಮ ಮರಣದ ಬಳಿ ಸರಿಯಾಗಿ ಕಾರ್ಯ ಆಗಿಲ್ಲವೆಂಬ ಆರೋಪವನ್ನು ತಮ್ಮ ಮನೆಯವರು ಎದುರಿಸಬಾರದು ಎಂಬ ಕಾರಣಕ್ಕೆ ಬದುಕಿದ್ದಾಗಲೇ ಈ ನಿರ್ಧಾರ ಮಾಡಿದ್ದಾರಂತೆ. ಇದರ ಜತೆಗೆ ಪಗಡಿ ಸಮಾರಂಭವೂ ಏರ್ಪಡಿಸಿ, ತಮ್ಮ ಮಗಳ 10 ವರ್ಷದ ಮಗ ಮುಕುಲ್ಗೆ ಪಗಡಿ ತೊಡಿಸಿ, ಮನೆಯ ಮುಂದಿನ ಜವಾಬ್ದಾರಿಯನ್ನು ಆತನಿಗೆ ನೀಡಲಾಗಿದೆ.
ತಾತನ ದೇಹಾಂತ್ಯದ ನಂತರ ಆ ಮಗು ಮನೆಯ ಜವಾಬ್ದಾರಿ ನಿರ್ವಹಿಸಬೇಕಾಗಿದೆ. ಹಾಗಾಗಿ ಪಗಡಿ ಸಮಾರಂಭವನ್ನೂ ಏರ್ಪಡಿಸಲಾಗಿತ್ತು. ಹೋಮ ಹವ, ಪಗಡಿ ಸಮಾರಂಭ ನಡೆಸಿ, ಕಾರ್ಯಕ್ರಮ ಮುಕ್ತಾಯ ಮಾಡಲಾಗಿದೆ.




