Haveri News: ಆಸ್ಪತ್ರೆಯಲ್ಲೂ ಕಳ್ಳರು ತಮ್ಮ ಹಾವಳಿ ಮುಂದುವರಿಸಿರುವುದಲ್ಲದೇ, ಹೆಣ್ಣು ಮಕ್ಕಳ ಜತೆ ಅಸಭ್ಯ ವರ್ತನೆ ತೋರಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಹಿಳಾ ರೋಗಿಗಳು ಮತ್ತು ರೋಗಿಗಳ ಜತೆ ಉಳಿಯಲು ಬಂದಿರುವ ಮಹಿಳಾ ಸಂಬಂಧಿಕರ ಜತೆ ಕಳ್ಳರು ಖಾಸಗಿ ಅಂಗಗಳನ್ನು ಸ್ಪರ್ಶಿಸಿ, ಅನುಚಿತ ವರ್ತನೆ ತೋರಿದ್ದಾರೆ. ಅಲ್ಲದೇ, ಸೆಲ್ ಫೋನ್, ಹಣ ಸೇರಿ ಬೆಲೆ ಬಾಳುವ ವಸ್ತುಗಳನ್ನು ಕದಿಯುವ ಪ್ರಯತ್ನ ಮಾಡಿದ್ದಾರೆ.
ಈ ಖದೀಮರು 1 ವಾರದಲ್ಲಿ 10ಕ್ಕೂ ಅಧಿಕ ಸೆಲ್ ಫೋನ್ ಕಳ್ಳತನ ಮಾಡಿದ್ದು, ಇವರು ಮಧ್ಯರಾತ್ರಿಯೇ ರೋಗಿಗಳನ್ನು ಟಾರ್ಗೇಟ್ ಮಾಡುತ್ತಾರೆ.
ಜಿಲ್ಲಾಸ್ಪತ್ರೆಯ ರೂಂ ನಂಬರ್ 109ರಲ್ಲಿ ಮಲಗಿದ್ದ ಮಹಿಳೆಯ ಬಳಿ, ರಾತ್ರಿ 2 ಗಂಟೆಯ ಹೋದ ವ್ಯಕ್ತಿ, ಆಕೆಯ ಖಾಸಗಿ ಅಂಗ ಸ್ಪರ್ಶಿಸಲು ಪ್ರಯತ್ನಿಸಿದ್ದಾನೆ. ಆದರೆ ಸ್ಪರ್ಶವಾಗುವ ಮುನ್ನವೇ, ಸದ್ದಿಗೆ ಮಹಿಳೆಯ ಎಚ್ಚರವಾಗಿ, ಆನ ಕೆನ್ನೆಗೆ ಬಾರಿಸಿದ್ದಾಳೆ. ಅಲ್ಲದೇ, ಜೋರಾಗಿ ಕಿರುಚಿದ್ದಾಳೆ. ಗಲಾಟೆ ಶುರುವಾಗುತ್ತಿದ್ದಂತೆ, ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಸದ್ಯ ಈ ಕೃತ್ಯ ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಯನ್ನು ಹಿಡಿದು ಕಠಿಣ ಶಿಕ್ಷೆ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಪದೇಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.




