Political News: ಸಿಎಂ ಡಿ.ಕೆ.ಶಿವಕುಮಾರ್ ಜಪಾನ್ಗೆ ತೆರಳಿ, ಅಲ್ಲಿ ಅಭಿವೃದ್ಧಿ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಗೃಹಸಚಿವರಾಾದ ಜಿ.ಪರಮೇಶ್ವರ್ಗೆ ನೂತನ ಕಾರ್ ಉಡುಗ“ರೆಯಾಗಿ ನೀಡಲಾಗಿದೆ. ಈ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿಗಳು ಜಪಾನ್ನಲ್ಲಿ… ಅಧಿಕಾರಿಗಳು ಮೋಜು ಮಸ್ತಿಯಲ್ಲಿ….. ರಾಜ್ಯದ ರೈತರು ಸಂಕಷ್ಟದಲ್ಲಿ… ಆಶಾ ಕಾರ್ಯಕರ್ತೆಯರು ಬೀದಿಯಲ್ಲಿ… ಕಷ್ಟಕ್ಕೆ ಕರಿಬೇಡಿ… ಮೋಜು ಮಸ್ತಿಗೆ ಮರೀಬೇಡಿ…. ಇದು ಕಾಂಗ್ರೆಸ್ ಸರ್ಕಾರದ ಸಾಧನೆ ಸರಮಾಲೆ …
ಈ ರೀತಿಯಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಅಸಮಾಧಾನ ವ್ಕ್ತಪಡಿಸಿರುವ ವಿಜಯೇಂದ್ರ, ಮಾನ್ಯ ರಿಯಲ್ ಎಸ್ಟೇಟ್ ಮುಖ್ಯಮಂತ್ರಿಗಳು ತಮ್ಮ ದಂಡಿನೊಂದಿಗೆ ಜಪಾನ್ ಪ್ರವಾಸದಲ್ಲಿದ್ದಾರೆ.. ರಾಜ್ಯಕ್ಕೆ ಬಂಡವಾಳ ಹೂಡಿಕೆಯ ಹೊಳೆಯನ್ನೇ ಹರಿಸಲಿದ್ದಾರೆ…ಅದೆಷ್ಟು ಬಂಡವಾಳ ರಾಜ್ಯಕ್ಕೆ ತರುತ್ತಾರೋ ಆ *ಶಿವನೇ*ಬಲ್ಲ.. ಎಂದು ವಂಗ್ಯವಾಡಿದ್ದಾರೆ.
ಇನ್ನೂ ಅಧಿಕಾರಿಗಳಿಗೆ ಹೇಳೋರು ಇಲ್ಲಾ.. ಕೇಳೋರು ಇಲ್ಲಾ… ಅವರಿಗೆ ಜನಸಾಮಾನ್ಯರ ಸಂಕಷ್ಟ ಕಣ್ಣಿಗೆ ಕಾಣೋಲ್ಲ… ಕಿವಿಗೆ ಕೇಳೋಲ್ಲ… ರೈತರು ಬೆಳೆದ ಬೆಳೆಗೆ ನೀರಿಲ್ಲದೆ ಸಂಕಷ್ಟದಲ್ಲಿದ್ದರೆ ಗದಗ ಡಿಸಿ ಮಾತ್ರ ಕುಣಿದು ಕುಪ್ಪಳಿಸ್ತಿದಾರೆ.. ಆಶಾ ಕಾರ್ಯಕರ್ತೆಯರು ತಿಂಗಳುಗಳಿಂದ ಮನೆ, ಕುಟುಂಬ ಬಿಟ್ಟು ಕೊರೆಯುವ ಚಳಿಯಲ್ಲಿ ಹಸುಗೂಸುಗಳೊಂದಿಗೆ, ನ್ಯಾಯಯುತ ವೇತನಕ್ಕಾಗಿ ರಸ್ತೆಯಲ್ಲಿಯೇ ಪ್ರತಿಭಟನೆ ನಡೆಸುತ್ತಿದ್ದಾರೆ.. ಇವರ ಸಂಕಷ್ಟ ಹೇಳತೀರದು.. ಎಂದು ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈತರ ಸಂಕಷ್ಟ ಕೂಡ ಇದಕ್ಕಿಂತ ಭಿನ್ನಾವಾಗಿಲ್ಲ.. ಬಿಡಿಗಾಸಿನ ಬರಪರಿಹಾರ ಇನ್ನೂ ನೀಡಲಾಗಿಲ್ಲ ಆದ್ರೂ ಈ ಸರ್ಕಾರಕ್ಕೆ ಇವರ ಕೂಗು ಕೇಳುತ್ತಿಲ್ಲ.. ಮಾನ್ಯ ಮುಖ್ಯಮಂತ್ರಿಗಳೇ ಹಾಗೂ ಅಂಧಾದರ್ಬಾರ್ ನಡೆಸುತ್ತಿರುವ ಅಧಿಕಾರಿಗಳೇ ನೊಂದ ಹೆಣ್ಣುಮಕ್ಕಳ ,ರೈತರ,ಬಡವರ ಶಾಪ ನಿಮ್ಮನ್ನು ತಟ್ಟದೇ ಬಿಡದು, ಅವರೆಲ್ಲರ ಹಿಡಿಶಾಪ ನಿಮ್ಮನ್ನ ಬಲಿ ಪಡೆದೆ ಪಡೆಯುತ್ತದೆ.. ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ, ಜನರು ತಕ್ಕ ಪಾಠ ಕಲಿಸಲಿದ್ದಾರೆ.. ಬಹಳ ದಿನ ಈ ನಿಮ್ಮ ಆಟ ನಡಿಯೋಲ್ಲ… ಎಲ್ಲದಕ್ಕೂ ಅಂತ್ಯ ಇರುತ್ತೇ… ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.




