ಕರೊನಾ ಮಹಾಮಾರಿ ಬಳಿಕ ರೋಗಿಗಳಿಗೆ ಆಮ್ಲಜನಕ ಪೂರೈಕೆ ಕೊರತೆ ಅನುಭವಿಸುತ್ತಿರೋ ಮಧ್ಯಪ್ರದೇಶಕ್ಕೆ ಕೇಂದ್ರ ಸರ್ಕಾರ ಪ್ರತಿನಿತ್ಯ 50 ಟನ್ ಆಮ್ಲಜನಕ ಪೂರೈಕೆಗೆ ಒಪ್ಪಿಗೆ ನೀಡಿದೆ.
ಈ ವಿಚಾರವಾಗಿ ಮಾತನಾಡಿದ ಮಧ್ಯಪ್ರದೇಶ ಸಿಎಂ ಶಿವರಾಜ ಸಿಂಗ್ ಚೌಹಾಣ್, ನಮ್ಮ ಬಳಿ ರೋಗಿಗಳಿಗೆ ಪೂರೈಸಲು ಆಮ್ಲಜನಕ ಕೊರತೆ ಇರುವ ಬಗ್ಗೆ ಕೇಂದ್ರದ ಗಮನಕ್ಕೆ ತಂದಿದ್ದೆ. ಹೀಗಾಗಿ ಕೇಂದ್ರ ಆಕ್ಸಿಜನ್ ಪೂರೈಕೆಗೆ ಸದ್ಯ ಒಪ್ಪಿಗೆ ನೀಡಿದ್ದು ಇದರಿಂದಾಗಿ ಪ್ರತಿನಿತ್ಯ ನಮ್ಮ ರಾಜ್ಯದಲ್ಲಿ 180 ಟನ್ ಆಮ್ಲಜನಕ ಸಂಗ್ರಹ ಇರಲಿದೆ ಅಂತಾ ಟ್ವೀಟ್ ಮಾಡಿದ್ದಾರೆ.