ಹಿರಿಯೂರು ಉಪಚುನಾವಣೆ ಗೆಲ್ಲಲು ಬಿಜೆಪಿ-ಜೆಡಿಎಸ್ ಹೊಸ ರಣತಂತ್ರ!

ಮುಂಬರುವ ಹಿರಿಯೂರು ವಿಧಾನಸಭಾ ಉಪಚುನಾವಣೆಗೆ ಯಾರನ್ನ ಕಣಕ್ಕಿಳಿಸಬೇಕು ಅನ್ನೋ ನಿರ್ಧಾರವನ್ನ ಎನ್‌ಡಿಎ ನಾಯಕರು ಬೇಗ ತೆಗೆದುಕೊಳ್ಳಬೇಕು ಅಂತ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ಅಭಿಪ್ರಾಯಪಟ್ಟಿದೆ. ಈ ಸಭೆಯಲ್ಲಿ, ಚುನಾವಣೆ ಘೋಷಣೆಯಾಗೋ ಕೊನೆ ಕ್ಷಣದವರೆಗೂ ಕಾಯೋದು ಬೇಡ, ರಾಷ್ಟ್ರೀಯ ನಾಯಕರ ಜೊತೆ ಮಾತಾಡಿ ಶೀಘ್ರ ತೀರ್ಮಾನ ಕೈಗೊಳ್ಳಬೇಕು ಅಂತ ನಾಯಕರು ಹೇಳಿದ್ದಾರೆ ಎಂದು ವರದಿಯಾಗಿದೆ..

ಈಗಾಗಲೇ ಟಿಕೆಟ್ ಯಾರಿಗೆ ಅನ್ನೋ ಬಗ್ಗೆ ಗೊಂದಲ ಶುರುವಾಗಿದ್ದು, ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿಯಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಗೊಂದಲ ಹೀಗೆಯೇ ಮುಂದುವರಿದ್ರೆ ಚುನಾವಣೆ ಮೇಲೆ ಎಫೆಕ್ಟ್ ಆಗುತ್ತೆ. ಹಾಗಾಗಿ ಹೈಕಮಾಂಡ್‌ಗೆ ಮತ್ತೊಮ್ಮೆ ಒತ್ತಾಯಿಸಿ ಬೇಗ ಅಭ್ಯರ್ಥಿ ಫೈನಲ್ ಮಾಡಬೇಕು ಅಂತ ಸಭೆಯಲ್ಲಿ ನಾಯಕರು ಚರ್ಚಿಸಿದ್ದಾರೆ ಅಂತ ಹೇಳಲಾಗ್ತಿದೆ.

ಸಭೆ ಬಳಿಕ ಮಾತಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ-ಜೆಡಿಎಸ್ ಮೈತ್ರಿ ತಾತ್ಕಾಲಿಕ ಅಲ್ಲ, ದೀರ್ಘಕಾಲ ಇರುತ್ತೆ ಅಂದಿದ್ದಾರೆ. ಕಾಂಗ್ರೆಸ್ ಆಡಳಿತ ಕೊನೆಗೊಳಿಸಲು ನಾವು ಒಗ್ಗಟ್ಟಾಗಿ ಹೋರಾಡ್ತೀವಿ, ಎರಡೂ ಪಕ್ಷಗಳ ನಡುವೆ ಯಾವುದೇ ಮನಸ್ತಾಪಕ್ಕೆ ಜಾಗ ಕೊಡಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಹಿರಿಯೂರು ಮತ್ತು ಧಾರವಾಡ ಕ್ಷೇತ್ರಗಳಲ್ಲಿ ಜೆಡಿಎಸ್, ಬಿಜೆಪಿ ಅನ್ನೋದಕ್ಕಿಂತ ಎನ್‌ಡಿಎ ಅಭ್ಯರ್ಥಿ ಗೆಲ್ಲೋದಷ್ಟೇ ಮುಖ್ಯ ಅಂತ ಹೇಳಿದ್ದಾರೆ.

ಇತ್ತ ಬಿಜೆಪಿ ನಾಯಕ ಆರ್. ಅಶೋಕ್ ಕೂಡ ಪ್ರತಿಕ್ರಿಯಿಸಿ, ಹಿರಿಯೂರು ಮತ್ತು ಧಾರವಾಡ ಗ್ರಾಮೀಣ ಉಪಚುನಾವಣೆ ಬಗ್ಗೆ ಸುದೀರ್ಘ ಚರ್ಚೆ ಆಗಿದೆ, ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಅಂತ ಕೇಂದ್ರದ ನಾಯಕರು ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ತಾರೆ ಅಂದಿದ್ದಾರೆ. ನಮ್ಮಲ್ಲಿ ಯಾವುದೇ ಹಗ್ಗಜಗ್ಗಾಟ ಇಲ್ಲ, ಸಂಪೂರ್ಣ ಸ್ಪಷ್ಟತೆ ಇದೆ ಅಂತ ಅಶೋಕ್ ತಿಳಿಸಿದ್ದು, ಒಟ್ಟಿನಲ್ಲಿ, ಉಪಚುನಾವಣೆಗೆ ಎನ್‌ಡಿಎ ಪಾಳಯದಲ್ಲಿ ಈಗಿನಿಂದಲೇ ಸಿದ್ಧತೆ ಜೋರಾಗಿದೆ. ಈ ಬಗ್ಗೆ ನಿಮ್ಮನಿಸಿಕೆ ಏನು ಕಾಮೆಂಟ್ ಮಾಡಿ ತಿಳಿಸಿ..

About The Author