ಜಪಾನ್ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರೋ ಯೋಶಿಹಿಡೆ ಸುಗಾರಿಗೆ ಟ್ವಿಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಜಪಾನ್ನ ನೂತನ ಪ್ರಧಾನಿಯಾಗಿ ಆಯ್ಕೆಯಾದ ಯೋಶಿಹಿಡೆ ಸುಗಾರಿಗೆ ಹೃದಯಪೂರ್ವಕ ಅಭಿನಂದನೆಗಳು. ಜಪಾನ್ ಜೊತೆಗಿನ ನಮ್ಮ ಕಾರ್ಯತಂತ್ರ ಹಾಗೂ ಜಾಗತಿಕ ಸಂಬಂಧ ಇನ್ನಷ್ಟು ಎತ್ತರಕ್ಕೆ ಹೋಗುತ್ತದೆ ಎಂಬ ನಂಬಿಕೆ ನನಗಿದೆ ಅಂತ ಜಪಾನ್ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಅನಾರೋಗ್ಯ ಕಾರಣದಿಂದ ಜಪಾನ್ ಪ್ರಧಾನಿ ಸ್ಥಾನಕ್ಕೆ ಶಿಂಜೋ ಅಬೆ ರಾಜೀನಾಮೆ ನೀಡಿದ್ದರು. ಹಾಗೂ ಈ ಸ್ಥಾನಕ್ಕೆ ಇದೀಗ ರೈತನ ಮಗ 71 ವರ್ಷ ಯೋಶಿಹಿಡೆ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.

ಫೋನಿನ ಮೂಲಕವೇ ನಿಮ್ಮ ಸಮಸ್ಯೆಗೆ ಪರಿಹಾರ
7483025648




