ಸಾಮಾಜಿಕ ನ್ಯಾಯ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ನಿರಂತರ 7 ದಿನಗಳ ಅಹೋರಾತ್ರಿ ಧರಣಿ

ತುಮಕೂರು: ಪ್ರತಿಭಟನಾ ಸಮಾವೇಶವನ್ನು ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಮ್ಮಿಕೊಳ್ಳಲಾಗಿದೆ. ನಮ್ಮ ಭವ್ಯ ಭಾರತ ಜಾಗತಿಕ ಮಟ್ಟದಲ್ಲಿ ಉನ್ನತ ಮನ್ನಣೆ ಪಡೆದಿರುವ ದೇಶ. ಹಾಗೆಯೇ ಸದಾ ಒಗ್ಗಟ್ಟಿನ ಹೆಸರಿನಲ್ಲಿ ಶ್ರಮಿಕ ಸಮುದಾಯಗಳನ್ನು ಶೋಷಣೆ ಮಾಡುತ್ತಾ ಸಾಗಿ ಬರುತ್ತಿರುವ ದೇಶ ನಮ್ಮದು.

ಅನ್ನ ನೀರು ಆಹಾರಗಳಿಗಾಗಿ ಪರಿತಪಿಸುವ ಅಸಂಖ್ಯಾತ ಸಮುದಾಯಗಳು ನಮ್ಮ ಮುಂದೆ ಇವೆ. ಶ್ರಮಿಕ ಸಮುದಾಯಗಳಾದ ಪರಿಶಿಷ್ಟ ಜಾತಿಗಳಲ್ಲಿ ಮಾದಿಗ ಸಮುದಾಯವು ತನ್ನ ಪಾಡಿಗೆ ಇಂದಿನ ಪರಂಪರೆಯಿಂದ ಪ್ರತಿಫಲಾಪೇಕ್ಷೆಯಿಲ್ಲದೆ ಸ್ವಚ್ಛ ಮಾಡುವ ಕೆಲಸಗಳನ್ನು ನಿರ್ವಹಿಸುತ್ತಿದೆ. ಇಂತಹ ಅನೇಕ ಸಮುದಾಯಗಳಿಗೆ ಸ್ವಾಭಿಮಾನ ಘನತೆ ನೀಡಿದ ಬಾಬಾಸಾಹೇಬರ ಶ್ರಮದ ಪ್ರತಿಫಲವನ್ನು ಸ್ವಲ್ಪ ಪ್ರಮಾಣದಲ್ಲಿ ಸಾಮಾಜಿಕ ಘನತೆ ಬಂದರೂ ಇನ್ನೂ ಸಹ ಶೋಷಣೆ ವ್ಯವಸ್ಥೆಯಿಂದ ಬಿಡಿಸಿಕೊಳ್ಳಲಾಗಲ್ಲ.

ಸಂವಿಧಾನದತ್ತವಾಗಿ ಬಂದಿರುವ ಮೀಸಲಾತಿಯನ್ನು ಮೊಟಕುಗೊಳಿಸುವ ಹುನ್ನಾರ ಒಂದು ಕಡೆಯಾದರೆ. ಮತ್ತೊಂದೆಡೆ ನಿಜವಾದ ಶೋಷಿತ ಸಮುದಾಯಗಳಿಗೆ ಆ ಮೀಸಲಾತಿ ತಲುಪದಿರುವುದು ಅತ್ಯಂತ ವಿಷಾದಕರವಾಗಿದೆ.

ಪೌರಕಾರ್ಮಿಕರಾಗಿ ಸ್ಲಂಗಳಲ್ಲಿ ವಾಸಮಾಡುತ್ತಾ ಹೀನಾಯವಾಗಿ ಬದುಕುತ್ತಿದ್ದಾರೆ. ಸಿಗಬೇಕಾದ ಮೀಸಲಾತಿ ಸಿಗದೆ ಪರದಾಡುತ್ತಿರುವುದನ್ನು ಈಗಲೂನೋಡುತ್ತಿದ್ದೇವೆ.

ಇಂತಹ ಸಮಯದಲ್ಲಿ ನಮ್ಮ ಎ.ಜೆ. ಸದಾಶಿವ ಆಯೋಗದ ಮೀಸಲಾತಿ ಒತ್ತಾಯಕ್ಕಾಗಿ ತಂಡವಾಗಿ ರಚಿಸಿ ಕೊಂಡಿರುವ ತುಮಕೂರಿನ ದಲಿತ ಮುಖಂಡರು ವಾಲೆಚಂದ್ರಯ್ಯ,ವಕೀಲರು ಹಾಗೂ ಮಾದಿಗ ದಂಡೋರ ಸಮಿತಿ ಪಾವಗಡ ಶ್ರೀರಾಮ್ ರವರು ಹಾಗೂ ಜಯ ಕರ್ನಾಟಕ ಜಿಲ್ಲಾ ಅಧ್ಯಕ್ಷರಾದ ಅರುಣ್ ಕುಮಾರ್, ರಾಜ್ಯ ಸಂಚಾಲಕರಾದ ಸೋಮಶೇಖರ್ ರವರು ಹಾಗೂ ಅನೇಕ ಕನ್ನಡ ಪರ ಸಂಘಟನೆಯ ನೇತೃತ್ವದಲ್ಲಿ ಎಲ್ಲಾ ತಾಲ್ಲೂಕಿನ ಎಲ್ಲಾ ಜಿಲ್ಲೆಯ ಮಾದಿಗ ಜನಾಂಗವನ್ನು ಒಟ್ಟುಗೂಡಿಸಿ 7 ದಿನಗಳ ಅಹೋ ರಾತ್ರಿ ಧರಣಿ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿದೆ.

ಕೆ.ರಾಜು,ಕರ್ನಾಟಕ ಟಿವಿ ತುಮಕೂರು.

About The Author