Saturday, March 15, 2025

Latest Posts

ದೇಶದಲ್ಲಿ 73,272 ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ: 926 ಸಾವು..

- Advertisement -

ದೇಶದಲ್ಲಿ, ರಾಜ್ಯದಲ್ಲಿ ಕೊರೊನಾ ಎಷ್ಟರ ಮಟ್ಟಿಗೆ ಮರಣ ಮೃದಂಗ ಬಾರಿಸುತ್ತಿದೆ ಅನ್ನೋದನ್ನ ಪ್ರತಿದಿನ ನೋಡುತ್ತಿದ್ದೇವೆ. ನಿನ್ನೆಯಿಂದ ಶಿಕ್ಷಕರ ಸಾವಾಗುತ್ತಿದ್ದು, ವಿದ್ಯಾಗಮ ಯೋಜನೆ ನಿಲ್ಲಿಸುವುದಕ್ಕೆ ಎಲ್ಲ ಕಡೆಯಿಂದ ಒತ್ತಡ ಹೇರಲಾಗುತ್ತಿದೆ. ಎಂಎನ್‌ಸಿ ಕಂಪನಿಗಳ ಕೆಲಸಗಾರರಿಗೆ ಜನವರಿ ತನಕ ಆಫೀಸಿಗೆ ಬರುವುದೇ ಬೇಡವೆಂದಿದ್ದಾರೆ. ಶಾಲಾ ಕಾಲೇಜುಗಳು ಇನ್ನೂ ಶುರುವಾಗಿಲ್ಲ. ಎಷ್ಟೋ ಬಡವರು ಇನ್ನೂ ಕೂಡ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ.

ಇನ್ನೊಂದು ಖುಷಿಯ ವಿಷಯವೆಂದರೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆಯೂ ಇಳಿಮುಖವಾಗಿದೆ. ಆದರೆ ಇಂದು ದೇಶದಲ್ಲಿ 73,272 ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಒಂದೇ ದಿನ 926 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.

ಈ ಮೂಲಕ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 69,79,424 ಕ್ಕೆ ಏರಿಕೆಯಾಗಿದೆ. ಒಟ್ಟು 69,79,424 ಕೊರೊನಾ ಪ್ರಕರಗಳ ಪೈಕಿ 8,83,185 ಸಕ್ರಿಯ ಪ್ರಕರಣಗಳಿವೆ. ಈವರೆಗೆ 59,88,823 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 1,07,416 ಜನ ಸಾವನ್ನಪ್ಪಿದ್ದಾರೆ.

- Advertisement -

Latest Posts

Don't Miss