Thursday, November 27, 2025

Latest Posts

ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಹಿನ್ನೆಲೆ..

- Advertisement -

ಕರ್ನಾಟಕದಲ್ಲಿ ಸುಬ್ರಹ್ಮಣ್ಯನಿಗೆ ಸೇರಿದ ದೇವಸ್ಥಾನಗಳು ಸುಮಾರಿಗೆ. ಅದರಲ್ಲಿ ಅತೀ ಪ್ರಸಿದ್ಧ ದೇವಾಲಯ ಅಂದ್ರೆ ಕುಕ್ಕೆ ಸುಬ್ರಹ್ಮಣ್ಯ ಇನ್ನೊಂದು ಪ್ರಸಿದ್ಧ ದೇವಸ್ಥಾನ ಅಂದ್ರೆ ಘಾಟಿ ಸುಬ್ರಹ್ಮಣ್ಯ. ಇಂದು ನಾವು ಘಾಟಿ ಸುಬ್ರಹ್ಮಣ್ಯ ದೇನವಸ್ಥಾನದ ಬಗ್ಗೆ ತಿಳಿಯೋಣ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಘಾಟಿ ಸುಬ್ರಹ್ಮಣ್ಯ ದೇವಸ್ಥಾನವಿದೆ. ಮಂಗಳವಾರ ಮತ್ತು ರವಿವಾರದ ದಿನ ಈ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹರಕೆ ಇದ್ದರೆ ತೀರಿಸುತ್ತಾರೆ. ನಾಗಪಂಚಮಿ, ಸುಬ್ರಹ್ಮಣ್ಯ ಸೃಷ್ಟಿ ದಿನವಂತೂ ಕಾಲಿಡಲು ಜಾಗವಿಲ್ಲದಷ್ಟು ಭಕ್ತರು ಬಂದು ಸೇರುತ್ತಾರೆ.

ಇನ್ನು ಸಾಮಾನ್ಯವಾಗಿ ಎಲ್ಲ ದೇವಸ್ಥಾನಗಳಲ್ಲಿ ದೇವರ ಮುಂಭಾಗದಲ್ಲಿ ಕನ್ನಡಿ ಇರುವುದನ್ನ ನಾವು ನೋಡ್ತೀವಿ. ಆದ್ರೆ ಘಾಟಿ ಸುಬ್ರಹ್ಮಣ್ಯದಲ್ಲಿ ಸುಬ್ರಹ್ಮಣ್ಯನ ಹಿಂಭಾಗದಲ್ಲಿ ಕನ್ನಡಿ ಇದೆ. ಯಾಕಂದ್ರೆ ಇಲ್ಲಿ ಏಕಶಿಲೆಯಲ್ಲಿ ಎರಡು ಮೂರ್ತಿಯನ್ನ ಕೆತ್ತಲಾಗಿದೆ. ಎದುರಿನಿಂದ ಸುಬ್ರಹ್ಮಣ್ಯನನ್ನು ಕಂಡರೆ, ಕನ್ನಡಿ ಮೂಲಕ ಶಿಲೆಯ ಹಿಂದಿನ ಭಾಗದಲ್ಲಿ ನರಸಿಂಹ ಮೂರ್ತಿಯನ್ನ ನಾವು ಕಾಣಬಹುದು.

ಸುಮಾರು ವರ್ಷದ ಹಿಂದೆ ವೀಳ್ಯದೆಲೆ ವ್ಯಾಪಾರಿಯೋರ್ವ ಇದೇ ಸ್ಥಳದಲ್ಲಿ ಮಲಗಿದ್ದಾಗ, ಕನಸ್ಸಿನಲ್ಲಿ ಸುಬ್ರಹ್ಮಣ್ಯ ಸ್ವಾಮಿ ಬಂದು ತಾನು ಇಲ್ಲೇ ನೆಲೆ ನಿಲ್ಲುವುದಾಗಿಯೂ, ಈ ವಿಷಯವನ್ನ ಮಹಾರಾಜರಿಗೆ ತಿಳಿಸಿದರೆ, ಅವರು ತನಗಾಗಿ ದೇವಸ್ಥಾನವನ್ನ ಕಟ್ಟುವುದಾಗಿಯೂ ಹೇಳುತ್ತಾನೆ. ಬೆಳಿಗ್ಗೆ ಎದ್ದ ತಕ್ಷಣ ವ್ಯಾಪಾರಿ ಮಹಾರಾಜರಿಗೆ ಈ ವಿಷಯ ತಿಳಿಸುತ್ತಾರೆ. ಆದ್ರೆ ನಿರ್ಲಕ್ಷ್ಯ ತೋರಿದ ಮಹಾರಾಜ, ಬೇಕಾದ್ರೆ ದುಡ್ಡು ಕೊಡ್ತೇನೆ ಆದ್ರೆ ಅಲ್ಲಿ ತನಕ ಬರಲಾಗುವುದಿಲ್ಲ ಎಂದು ದುರಹಂಕಾರದ ಮಾತನ್ನಾಡುತ್ತಾನೆ. ಅಂದೇ ಸುಬ್ರಹ್ಮಣ್ಯ ರಾಜನ ಕನಸ್ಸಿನಲ್ಲಿ ಬಂದು ನಿನಗೆ ಮಕ್ಕಳಾಗದಿರಲಿ, ನಿನ್ನ ಖಜಾನೆ ಬರಿದಾಗಲಿ ಎಂದು ಶಾಪ ಕೊಡುತ್ತಾನೆ.

ಇದಕ್ಕೆ ಹೆದರಿದ ರಾಜ, ದೇವಸ್ಥಾನ ಕಟ್ಟಬೇಕಾದ ಸ್ಥಳಕ್ಕೆ ಬಂದು ಪೂಜೆ ಮಾಡಿ, ದೇವಸ್ಥಾನ ಕಟ್ಟಿಸುತ್ತಾನೆ. ಮಕ್ಕಳಿದ್ದವರು, ರೋಗ ರುಜಿವಿದ್ದವರು, ಹಲವು ತೊಂದರೆ ಇದ್ದವರು ಇಲ್ಲಿ ಬಂದು ದೇವರ ದರ್ಶನ ಪಡೆದು ಹರಕೆ ತೀರಿಸುತ್ತಾರೆ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ,
ವ್ಯಾಪಾರ ಅಭಿವೃದ್ಧಿ, ಕೋಟರ್್, ಕಚೇರಿ,
ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶಿಕರಣ, ಪರ ಸ್ತ್ರೀ/ಪುರುಷ
ಸಂಬಂಧ ಬಿಡಿಸಲು, ಜೀವನದ ಸಕಲ ಸಮಸ್ಯೆಗಳಿಗೆ
ಒಂದು ಫೋನ್ ಕರೆ ಮೂಲಕ ಪರಿಹಾರ.
ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

- Advertisement -

Latest Posts

Don't Miss