Friday, March 14, 2025

Latest Posts

ಆಯುಧ ಪೂಜೆ ಯಾಕೆ ಮಾಡಬೇಕು..? ಈ ಪೂಜೆ ಶುರುವಾಗಿದ್ದಾದರೂ ಹೇಗೆ..?

- Advertisement -

ನವರಾತ್ರಿಯ ವಿಶೇಷವಾಗಿ ನಾವು ಇಂದು ಆಯುಧ ಪೂಜೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ನವರಾತ್ರಿಯಲ್ಲಿ, ದುರ್ಗಾ ಪೂಜೆ, ಸರಸ್ವತಿ ಪೂಜೆ ಜೊತೆ ಅದ್ಧೂರಿಯಾಗಿ ಮಾಡುವ ಹಬ್ಬ ಅಂದ್ರೆ ಆಯುಧ ಪೂಜೆ. ಆಯುಧ ಪೂಜೆ ಯಾಕೆ ಮಾಡಬೇಕು..? ಈ ಪೂಜೆ ಶುರುವಾಗಿದ್ದಾದರೂ ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ನವರಾತ್ರಿಯ ಒಂಬತ್ತನೇ ದಿನ ಆಯುಧ ಪೂಜೆ ಆಚರಿಸಲಾಗುತ್ತದೆ. ಹಿಂದೂಗಳ ಮನೆ ಮನೆಯಲ್ಲಿ, ಕಚೇರಿ, ಅಂಗಡಿ ಎಲ್ಲ ಕಡೆಯೂ ಆಯುಧ ಪೂಜೆ ಆಚರಿಸಿ, ಅಂದು ಕೆಲಸಕ್ಕೆ ರಜೆ ನೀಡಲಾಗುತ್ತದೆ. ಯಾಕಂದ್ರೆ ಸರಸ್ವತಿ ಪೂಜೆ ದಿನ ಹೇಗೆ ಪುಸ್ತಕಗಳನ್ನ ಪೂಜೆಗಿಟ್ಟು ಮೂರು ದಿನ ಅಭ್ಯಾಸ, ಓದೆಲ್ಲ ಬಿಟ್ಟು ಹಬ್ಬವನ್ನ ಹೇಗೆ ಆಚರಿಸುತ್ತೇವೋ, ಅದೇ ರೀತಿ ಆಯುಧ ಪೂಜೆ ದಿನ ಆಯುಧಗಳನ್ನ ಪೂಜೆ ಮಾಡಬೇಕು. ಮತ್ತು ವಿಜಯದಶಮಿ ತನಕ ಆ ಆಯುಧಗಳನ್ನ ಬಳಸುವಂತಿಲ್ಲ. ವಿಜಯದಶಮಿ ದಿನ ಮತ್ತೊಮ್ಮೆ ಪೂಜೆ ಮಾಡುವ ಮೂಲಕ ಆಯುಧಗಳನ್ನ ತೆಗೆದು ಬಳಸಬೇಕು. ಇದರ ಅರ್ಥವೆಂದರೆ, ಪ್ರತಿದಿನ ನಮ್ಮ ಜೀವನದಲ್ಲಿ ಬಳಸುವ ಆಯುಧಗಳಿಗೆ ಒಂದು ದಿನವಾದರೂ ವಿಶ್ರಾಂತಿ ಸಿಗಲಿ ಅನ್ನೋದೇ ಇದರ ಅರ್ಥ.

ಇನ್ನು ಆಯುಧ ಪೂಜೆ ದಿನ ದೇವಿಗೆ ಬಲಿಕೊಡುವ ಪದ್ಧತಿ ಇದೆ. ಆದ್ರೆ ಪ್ರಾಣಿಗಳನ್ನಲ್ಲ ಬದಲಾಗಿ, ಬೂದುಗುಂಬಳಕಾಯಿಯನ್ನ ಒಡೆದು ಅದರಲ್ಲಿ ಕುಂಕುಮವನ್ನ ಹಾಕಿ ನೈವೇದ್ಯವಾಗಿರಿಸುತ್ತಾರೆ. ಇದಕ್ಕೆ ಕಾರಣವೇನೆಂದು ನೋಡುವುದಾದರೆ, ಮಹಾಕಾಳಿಗೆ ಮಾಂಸ ಭಕ್ಷ್ಯವನ್ನ ನೀಡಿದರೆ ಉತ್ತಮ ಫಲ ನೀಡುತ್ತಾಳೆ ಅನ್ನುವ ನಂಬಿಕೆ ಇದೆ. ಇದೇ ರೀತಿ ಮಹಾಕಾಳಿ ಪ್ರತ್ಯಕ್ಷಳಾದಾಗ ಆಕೆಯ ಕೋರಿಕೆಯನ್ನ ಕೇಳಿದರೆ, ಮಾಂಸಭಕ್ಷ್ಯ ಬೇಕೆನ್ನುತ್ತಾಳೆ. ಇದನ್ನರಿತ ಶಂಕರಾಚಾರ್ಯರು ಯಾವ ಪಶು ಪಕ್ಷಿಗಳಿಗೂ ಹಿಂಸಿಸದೇ, ಬೂದುಗುಂಬಳ ಕಾಯಿಯನ್ನ ಒಡೆದು ಅದಕ್ಕೆ ಕುಂಕುಮ ಹಚ್ಚಿ, ದೇವಿಗೆ ಅರ್ಪಿಸುತ್ತಾರೆ. ಇದಕ್ಕೆ ಒಲಿದ ಕಾಳಿ, ಶಂಕರಾಚಾರ್ಯ ಪ್ರಾರ್ಥನೆ, ನೈವೇದ್ಯಕ್ಕೆ ಮೆಚ್ಚಿ ಸೌಮ್ಯ ರೂಪ ತಾಳುತ್ತಾಳೆ.

ಇನ್ನು ಆಯುಧ ಪೂಜೆಯ ಆರಂಭ ನೋಡುವುದಾದರೆ, ಮೊದಲೆಲ್ಲ ಯುದ್ಧಕ್ಕೆ ಹೋಗುತ್ತಿದ್ದ ರಾಜಕುಟುಂಬಸ್ಥರು, ಆ ಆಯುಧಕ್ಕೆ ಒಂದು ದಿನವಾದರೂ ವಿಶ್ರಾಂತಿ ಸಿಗಲಿ, ನಮ್ಮನ್ನು ಕಾಪಾಡುವ ಆಯುಧಕ್ಕೆ ಒಂದು ದಿನವಾದರೂ ಪೂಜೆ ಸಲ್ಲಲಿ ಎಂಬ ಕಾರಣಕ್ಕೆ ನವರಾತ್ರಿಯ ಒಂಭತ್ತನೇ ದಿನದಂದು ಪೂಜೆ ಸಲ್ಲಿಸುತ್ತಾರೆ. ಇದನ್ನು ಕಂಡ ಪ್ರಜೆಗಳು ಸಹ ತಾವು ಬಳಸುವ ಆಯುಧ, ವಾಹನ, ಅಡಿಗೆಗೆ ಬಳಸುವ ಕತ್ತಿ ಚಾಕುವಿಗೆಲ್ಲ ಪೂಜೆ ಸಲ್ಲಿಸಲು ಶುರು ಮಾಡಿದರು. ಅಂದಿನಿಂದ ಆಯುಧ ಪೂಜೆ ಆರಂಭವಾಯಿತು. ಮೈಸೂರು ಮನೆತನದಲ್ಲಿ ಇಂದಿಗೂ ಸಹ, ಶಸ್ತ್ರಾಸ್ತ್ರಗಳಿಗೆ ಪದ್ಧತಿ ಪ್ರಕಾರ ಪೂಜೆ ಸಲ್ಲಿಸಲಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss