Friday, July 4, 2025

Latest Posts

ಕುಜದೋಷ ಎಂದರೇನು..? ಇದಕ್ಕೆ ಪರಿಹಾರವೇನು.?

- Advertisement -

ಕೆಲವರಿಗೆ ಮದುವೆಯಾಗಲು ಹಲವಾರು ಅಡೆತಡೆಗಳಿರುತ್ತದೆ. ಉತ್ತಮ ನಡತೆ, ಕೆಲಸ, ಸೌಂದರ್ಯ ಎಲ್ಲ ಇದ್ದರೂ ಕೂಡ ಜಾತಕದಲ್ಲಿರುವ ಸಮಸ್ಯೆಯಿಂದ ವಿವಾಹ ವಿಳಂಬವಾಗುತ್ತದೆ. ಇಂಥ ಸಮಸ್ಯೆಗಳಲ್ಲಿ ಕುಜದೋಷ ಕೂಡ ಒಂದು. ಹಾಗಾದ್ರೆ ಕುಜದೋಷ ಅಂದ್ರೇನು..? ಇದಕ್ಕೆ ಪರಿಹಾರವೇನು ಅನ್ನೋ ಬಗ್ಗೆ ತಿಳಿಯೋಣ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕುಜ ದೋಷವನ್ನ, ಮಂಗಳ ದೋಷ ಅಥವಾ ಮಾಂಗಲೀಕ ದೋಷ ಅಂತಾ ಕರೆಯುತ್ತಾರೆ. ಕುಜ ಅಂದ್ರೆ ಮಾಂಗಲ್ಯಕಾರಕ. ಹಾಗಾಗಿ ಕುಜದೋಷ ಇದ್ದವರ ವೈವಾಹಿಕ ಜೀವನ ಸುಖಕರವಾಗಿರುವುದಿಲ್ಲ. ಕಲಹ, ಹಿಂಸೆ, ಭಿನ್ನಾಭಿಪ್ರಾಯ ಇತ್ಯಾದಿ ತಾಪತ್ರಯ ಕಂಡು ಬರುತ್ತದೆ. ಹಾಗಾಗಿ ಕುಜ ದೋಷ ಇದ್ದವರು ಲವ್ ಮಾಡಿದ್ರೆ, ಕೆಲವೆಡೆ ಮೊದಲು ಕತ್ತೆಯ ಜೊತೆಗೋ, ಅಥವಾ ಮರದ ಜೊತೆಗೋ ಮದುವೆ ಮಾಡಿ, ನಂತರ ಆ ಮರವನ್ನ ಕಡಿದು, ನಂತರ ಪ್ರೇಮಿಗಳ ಮದುವೆ ಮಾಡಿಸುತ್ತಾರೆ. ಅಥವಾ ಕುಜದೋಷ ಇರುವ ವರನನ್ನ ಕುಜ ದೋಷ ಇರುವ ವಧುವಿನೊಂದಿಗೆ ಮದುವೆ ಮಾಡಿಸುತ್ತಾರೆ.

ಇನ್ನು ಯಾವ ನಕ್ಷತ್ರದಲ್ಲಿ ಜನಿಸಿದವರಿಗೆ ಕುಜದೋಷ ಇರುವುದಿಲ್ಲಾ ಅನ್ನೋದನ್ನ ನೋಡುವುದಾದರೆ, ಪುಷ್ಯ, ಪುನರ್ವಸು, ಮೃಗಶಿರಾ, ಸ್ವಾತಿ, ಅಶ್ವಿನಿ, ಆಶ್ಲೇಷಾ, ಉತ್ತರ, ಉತ್ತರಾಷಾಢ, ಪೂರ್ವಾಷಾಡ, ರೇವತಿ, ಶ್ರವಣ, ಅನುರಾಧಾ, ಉತ್ತರಾಭಾಧ್ರ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಕುಜದೋಷ ಇರುವುದಿಲ್ಲ. ಇದನ್ನು ಬಿಟ್ಟು ಬೇರೆ ನಕ್ಷತ್ರದಲ್ಲಿ ಜನಿಸಿದವರಿಗೆ ಕುಜದೋಷವಿರುವ ಸಾಧ್ಯತೆ ಇದೆ.

ಇನ್ನು ಕುಜದೋಷವಿದ್ದರೂ ಕೆಲವರು ವಿವಾಹವಾಗುತ್ತಾರೆ. ಅಥವಾ ವಿವಾಹ ವಿಳಂಬವಾಗುತ್ತದೆ. ಈ ಕುಜದೋಷಕ್ಕೆ ಪರಿಹಾರ ಏನು ಅಂತಾ ನೋಡುವುದಾದರೆ, ಕುಜ ಗಾಯತ್ರಿ ಮಂತ್ರ ಪಠಿಸಬೇಕು. ಆ ಮಂತ್ರ ಹೀಗಿದೆ,
ಧರಸುತಾಯ ವಿಧ್ಮಹೇ, ಋಣಹರಾಯ ಧೀಮಹಿ
ತನ್ನೋ ಕುಜಃ ಪ್ರಚೋದಯಾತ್

ಈ ಮಂತ್ರವನ್ನ ಪ್ರತಿದಿನ ಶುಚಿರ್ಭೂತರಾಗಿ, 108 ಬಾರಿ ಜಪಿಸಬೇಕು. ಹನುಮಾನ್ ಚಾಲೀಸಾ ಓದಬೇಕು. ಮಂಗಳವಾರ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ. ಅಂಗಾರಕ ಅಥವಾ ಮಂಗಳ ಕೆಂಪು ಬಣ್ಣದ ಪ್ರಿಯನಾಗಿರುವ ಕಾರಣ, ಕೆಂಪು ವಸ್ತ್ರವನ್ನ ದಾನ ಮಾಡುವುದರಿಂದ ಮತ್ತು ತೊಗರಿ ಬೇಳೆ ದಾನ ಮಾಡುವುದರಿಂದ ಕುಜದೋಷ ಪರಿಹಾರವಾಗುತ್ತದೆ. ಸಾಧ್ಯವಾದಲ್ಲಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಬನ್ನಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss