Monday, December 23, 2024

Latest Posts

ಪತ್ನಿಯ ಎದುರು ಇಂಥ ಮಾತುಗಳನ್ನಾಡಬೇಡಿ, ಈ ತಪ್ಪುಗಳನ್ನ ಮಾಡಬೇಡಿ..!

- Advertisement -

ಪತಿ- ಪತ್ನಿ ಜೀವನ ಉತ್ತಮವಾಗಿರಬೇಕು ಅಂದ್ರೆ, ಪತಿ- ಪತ್ನಿ ಕೆಲ ತಪ್ಪುಗಳನ್ನ ಮಾಡಬಾರದು. ಈ ಮೊದಲೇ ನಾವು ಚಾಣಕ್ಯ ನೀತಿಯಲ್ಲಿ ಪತ್ನಿಯಾಗುವವರು ಯಾವ ತಪ್ಪುಗಳನ್ನ ಮಾಡಬಾರದು ಅಂತಾ ಹೇಳಿದೀವಿ. ಇದೇ ರೀತಿ ಇಂದು ಪತಿಯಾದವನು ಪತ್ನಿ ಮುಂದೆ ಯಾವ ತಪ್ಪುಗಳನ್ನ ಮಾಡಬಾರದು ಅನ್ನೋ ಬಗ್ಗೆ ಹೇಳ್ತೀವಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೊದಲನೇಯದಾಗಿ, ಪತ್ನಿಯ ಮುಂದೆ ಬೇರೆ ಹೆಣ್ಣು ಮಕ್ಕಳನ್ನ ಹೊಗಳಬಾರದು. ಇದರಿಂದ ಪತ್ನಿಯ ಸ್ವಭಿಮಾನಕ್ಕೆ ಧಕ್ಕೆಯಾಗುತ್ತದೆ. ನೀವು ಪತ್ನಿಯನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದರೂ ಕೂಡ, ನೀವು ಪತ್ನಿಯ ಮುಂದೆ ಒಮ್ಮೆ ಬೇರೆ ಹುಡುಗಿಯ ಗುಣಗಾನ ಮಾಡಿದರೆ, ನಿಮ್ಮ ಪ್ರೀತಿ ನೀರಲ್ಲಿ ಹೋಮ ಮಾಡಿದಂತಾಗುತ್ತದೆ. ಇದರಿಂದ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಯಾಕಂದ್ರೆ ಪತಿ ಬರೀ ತನಗಷ್ಟೇ ಹೊಗಳಲಿ ಎಂಬುದು ಪತ್ನಿಯ ಆಸೆಯಾಗಿರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಪತ್ನಿಯ ಮುಂದೆ ಬೇರೆ ಹೆಣ್ಣಿನ ಗುಣಗಾನ ಮಾಡಬೇಡಿ.

ಎರಡನೇಯದಾಗಿ, ಪತ್ನಿಯ ಮುಂದೆ ಪತಿ ತನ್ನ ಮನೆಯವರನ್ನ ಬೈಯ್ಯಬಾರದು ಮತ್ತು ಮತ್ತು ಗೌರವ ಕೊಡುವುದನ್ನು ಮರೆಯಬಾರದು. ಕೆಲವೊಮ್ಮೆ ಕೆಲಸದ ಒತ್ತಡದಲ್ಲೋ, ಅಥವಾ ಯಾವುದೋ ಟೆನ್ಶನ್‌ನಲ್ಲೋ ಪತ್ನಿಯ ಎದುರು ಪತಿ ತನ್ನ ತಂದೆ ತಾಯಿಯನ್ನ ಗೌರವಿಸದೇ, ಬಾಯಿಗೆ ಬಂದಂತೆ ಮಾತನಾಡುತ್ತಾನೆ. ಆದ್ರೆ ಹೀಗೆ ಮಾಡುವುದು ತಪ್ಪು. ಅಲ್ಲದೇ, ಹೆಂಡತಿಯ ತಂದೆ ತಾಯಿಗೂ ಕೂಡ ಗೌರವದಿಂದ ಕಾಣಬೇಕು. ಹೀಗೆ ಮಾಡಿದ್ರೆ, ಪತ್ನಿ ಕೂಡ ತನ್ನ ತಂದೆ ತಾಯಿ ಜೊತೆ ಅತ್ತೆ ಮಾವನನ್ನ ಕೂಡ ಗೌರವಿಸುತ್ತಾಳೆ.

ಮೂರನೇಯದಾಗಿ, ಪತ್ನಿ ಎದುರಿಗೆ ನೀವು ಕಣ್ಣೀರು ಹಾಕಬಾರದು. ಪದೇ ಪದೇ ಪತಿ ಹೆಣ್ಣು ಮಕ್ಕಳಂತೆ ಕಣ್ಣೀರು ಹಾಕಿದ್ರೆ, ಪತ್ನಿಗೆ ಪತಿಯ ಬಗ್ಗೆ ಗೌರವ ಕಡಿಮೆಯಾಗಿಬಿಡುತ್ತದೆ. ಈ ಮನುಷ್ಯನ ಕೈಯಲ್ಲಿ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ನಿರ್ಧರಿಸಿ, ಆಕೆ ನಿಮ್ಮನ್ನ ದೂರ ಮಾಡಲೂಬಹುದು. ಹಾಗಾಗಿ ಪತ್ನಿ ಎದುರಿಗೆ ಪದೇ ಪದೇ ನೀವು ಎಮೋಷನಲ್, ಕೈಲಾಗದವನು ಎಂದು ತೋರಿಸಿಕೊಳ್ಳಬೇಡಿ. ಏನೇ ಆದರೂ ಧೈರ್ಯಗೆಡನೇ ಮುನ್ನಡೆಯುವುದು, ಧೈರ್ಯವಂತ ಪತಿಯ ಗುಣ.

ಈ ಮೂರು ತಪ್ಪುಗಳಲ್ಲಿ ಯಾವುದಾದರೂ ಒಂದು ತಪ್ಪು ಮಾಡಿದ್ರೂ ಕೂಡಾ, ಬಾಂಧವ್ಯದಲ್ಲಿ ಬಿರುಕು ಮೂಡುತ್ತದೆ. ಪತ್ನಿಗೆ ಪತಿಯ ಮೇಲಿನ ಪ್ರೀತಿ ಕಡಿಮೆಯಾಗಲೂಬಹುದು. ಆಕೆ ಪರ ಪುರುಷನ ಕಡೆಗೆ ಆಕರ್ಷಿತಳಾಗಲೂಬಹುದು. ಹಾಗಾಗಿ ಯಾವುದೇ ಕಾರಣಕ್ಕೂ ಗಂಡ ಹೆಂಡತಿಯ ಮುಂದೆ ಈ ತಪ್ಪುಗಳನ್ನ ಮಾಡಬಾರದು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss