Thursday, August 21, 2025

Latest Posts

ಮಕ್ಕಳು ಓದುವಾಗ ಈ ನಿಯಮಗಳನ್ನ ಅನುಸರಿಸಿದರೆ ಉತ್ತಮ..

- Advertisement -

ಕೆಲವರು ಬೇಕಾದಷ್ಟು ಶ್ರೀಮಂತರಿರುತ್ತಾರೆ. ಮಕ್ಕಳನ್ನ ಓದಿಸೋಕ್ಕೆ ಎಷ್ಟು ಖರ್ಚಾಗತ್ತೋ ಅಷ್ಟು ಖರ್ಚು ಮಾಡಿಸುವಷ್ಟು ಯೋಗ್ಯತೆ ಹೊಂದಿರುತ್ತಾರೆ. ಆದ್ರೆ ಮಕ್ಕಳು ವಿದ್ಯಾಭ್ಯಾಸದಲ್ಲಿ ಗಮನ ಕೊಡದಿದ್ದರೆ ಏನು ಪ್ರಯೋಜನ..? ಇನ್ನು ಕೆಲ ಮಕ್ಕಳು ಎಷ್ಟೇ ಓದಿದರೂ ಅವರಿಗೆ ಓದಿದ್ದು ತಲೆಗೆ ತಾಗುವುದಿಲ್ಲ. ಹಾಗಾಗಿ ನಾವಿಂದು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಲಭಿಸಬೇಕು ಅಂದ್ರೆ ಅವರು ಓದಲು ಕೂರುವ ಜಾಗ ಹೇಗಿರಬೇಕು..? ಅನ್ನೋ ಬಗ್ಗೆ ಹೇಳಲಿದ್ದೇವೆ.

ನೀವು ಓದುವ ಕೋಣೆ ಉತ್ತರದಿಕ್ಕಿನಲ್ಲಿರಲಿ. ಪುಸ್ತಕಗಳನ್ನ ಪೂರ್ವ ಭಾಗದಲ್ಲಿರಿಸಿ, ಮತ್ತು ನೀವು ಕೂಡ ಪೂರ್ವ ದಿಕ್ಕಿನಲ್ಲಿ ಓದಲು ಕುಳಿತುಕೊಳ್ಳಿ.

ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿಗೆ ಕುಳಿತು ಓದಬಾರದು. ಇದರಿಂದ ಓದಿದ್ದು ನೆನಪುಳಿಯುವುದಿಲ್ಲ. ಅಲ್ಲದೇ, ಮಕ್ಕಳಲ್ಲಿ ಅಶಿಸ್ತು ಹೆಚ್ಚಾಗುತ್ತದೆ.

ಬೆಳಿಗ್ಗೆ 4ರಿಂದ 6 ಗಂಟೆಯ ತನಕ ಓದಲು ಉತ್ತಮ ಕಾಲ ಅಂತಾ ಹೇಳಲಾಗುತ್ತದೆ. ಇದು ಬ್ರಾಹ್ಮಿ ಮುಹೂರ್ತವಾಗಿದ್ದು, ಈ ಕಾಲದಲ್ಲಿ ಎದ್ದು ಓದಲು ಕುಳಿತರೆ, ಉತ್ತಮ ವಿದ್ಯೆ ಪ್ರಾಪ್ತಿಯಾಗುತ್ತದೆ.

ಓದಲು ಕೂರುವ ಮೊದಲು 10ರಿಂದ 15 ನಿಮಿಷ ಧ್ಯಾನ ಮಾಡಿ. ಧ್ಯಾನ ಮಾಡುವುದರಿಂದ ಏಕಾಗೃತೆ ಹೆಚ್ಚುತ್ತದೆ. ಏಕಾಗೃತೆ ಹೆಚ್ಚಾದರೆ, ಓದಿದ್ದು ಹಲವು ದಿನಗಳ ಕಾಲ ನೆನಪಿನಲ್ಲಿ ಉಳಿಯುತ್ತದೆ.

ಇನ್ನು ಇಂದಿನ ಕಾಲದ ಮಕ್ಕಳಿಗೆ ಮೊಬೈಲ್‌ನಲ್ಲಿ ಹೆಚ್ಚು ಆಸಕ್ತಿ. ಆದ್ರೆ ಓದುವ ಸಮಯದಲ್ಲಿ ಟಿವಿ, ಮೊಬೈಲ್ ಇದ್ಯಾವುದೂ ಅಕ್ಕಪಕ್ಕ ಇರದಂತೆ ನೋಡಿಕೊಳ್ಳಿ. ಇದರಿಂದ ಓದಿನಲ್ಲಿ ಏಕಾಗೃತೆ ಇರುವುದಿಲ್ಲ.

ಓದುವ ಕೋಣೆಯಲ್ಲಿ ದೇವರ ಫೋಟೋ ಇರಲಿ. ವಿದ್ಯೆಗೆ ಅಧಿದೇವತೆ ಸರಸ್ವತಿ. ಆಕೆಯ ಫೋಟೋವನ್ನ ಹಾಕಿದರೆ ಉತ್ತಮ. ಮತ್ತು ಕೆಲ ಶ್ಲೋಕಗಳನ್ನ ಮಕ್ಕಳಿಗೆ ಕಲಿಸಿ, ಅದನ್ನ ಓದುವ ಮೊದಲು ಹೇಳಲು ಕಲಿಸಿಕೊಡಿ.

- Advertisement -

Latest Posts

Don't Miss