Friday, March 14, 2025

Latest Posts

ಯಾವ ರಾಶಿಯವರಿಗೆ ಯಾವ ಬಣ್ಣ ಉತ್ತಮ..? ಇಲ್ಲಿದೆ ನೋಡಿ ಮಾಹಿತಿ..

- Advertisement -

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ, ನಕ್ಷತ್ರಗಳಿಗೆ ಎಷ್ಟು ಮನ್ನಣೆ ಇದೇಯೋ ಅಷ್ಟೇ ಮಹತ್ವ ಬಣ್ಣಗಳಿಗಿದೆ. ಇಂಥ ರಾಶಿ, ನಕ್ಷತ್ರದವರು ಇಂಥ ಬಣ್ಣದ ಬಟ್ಟೆ ಧರಿಸಿದರೆ ಉತ್ತಮ, ಇಂಥ ಬಣ್ಣವನ್ನ ಅನುಸರಿಸಿದರೆ ಉತ್ತಮ ಅಂತಾ ಹೇಳಲಾಗತ್ತೆ. ಹಾಗಾದ್ರೆ ಯಾವ ರಾಶಿಯವರಿಗೆ, ಯಾವ ಬಣ್ಣ ಉತ್ತಮ ಅಂತಾ ನೋಡೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೇಷ ರಾಶಿ: ಈ ರಾಶಿಯವರ ಲಕ್ಕಿ ಕಲರ್ ಕೆಂಪು. ಮೇಷ ರಾಶಿಯವರು ವಿಶೇಷ ಸಂದರ್ಭದಲ್ಲಿ ಕೆಂಪು ಬಣ್ಣದ ಬಟ್ಟೆ ಧರಿಸಿದರೆ ಉತ್ತಮ. ಈ ಬಣ್ಣ ನಿಮ್ಮನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತ್ತದೆ.

ವೃಷಭ ರಾಶಿ: ಈ ರಾಶಿಯವರ ಲಕ್ಕಿ ಕಲರ್ ಹಸಿರು. ವೃಷಭ ರಾಶಿ ಅಂದ್ರೆ ಪ್ರಕೃತಿಗೆ ಸಮಾನವಾದ ರಾಶಿ. ಪ್ರಕೃತಿಯಂತೆ ತಾಳ್ಮೆ ಸ್ವಭಾವ ಹೊಂದಿರುವ ವೃಷಭ ರಾಶಿಯವರು ಹಸಿರು ಬಣ್ಣವನ್ನ ಹೆಚ್ಚು ಬಳಸುವುದು ಉತ್ತಮ.

ಮಿಥುನ ರಾಶಿ: ಈ ರಾಶಿಯವರ ಲಕ್ಕಿ ಕಲರ್ ಹಳದಿ. ಮಿಥುನ ರಾಶಿಯವರ ಆಲೋಚನಾ ಶಕ್ತಿ ಉತ್ತಮವಾಗಿರಲು, ಹಳದಿ ಬಣ್ಣದ ಬಟ್ಟೆ ಧರಿಸಿದರೆ ಉತ್ತಮ.

ಕರ್ಕ ರಾಶಿ: ಈ ರಾಶಿಯವರ ಲಕ್ಕಿ ಕಲರ್ ಬಿಳಿ ಅಥವಾ ಬೆಳ್ಳಿ. ಕರ್ಕ ರಾಶಿಯ ಅಧಿಪತಿ ಚಂದ್ರ. ಚಂದ್ರನ ಬಣ್ಣ ಬಿಳಿ ಮತ್ತು ಬೆಳ್ಳಿ. ಹೀಗಾಗಿ ಈ ರಾಶಿಯವರು ಬೆಳ್ಳಿ ಧರಿಸಬೇಕು. ಅಥವಾ ಬಿಳಿ ಅಥವಾ ಬೆಳ್ಳಿ ಬಣ್ಣದ ಬಟ್ಟೆ ಧರಿಸಿದರೆ ಉತ್ತಮ.

ಸಿಂಹ ರಾಶಿ: ಈ ರಾಶಿಯವರ ಲಕ್ಕಿ ಕಲರ್ ಚಿನ್ನದ ಬಣ್ಣ. ಚಿನ್ನದ ಬಣ್ಣದ ಬಟ್ಟೆ ಅಥವಾ ಚಿನ್ನ ಧರಿಸುವುದರಿಂದ ಸಿಂಹ ರಾಶಿಯವರು ಎಲ್ಲರ ಮಧ್ಯೆ ವಿಜೃಂಭಿಸುತ್ತಾರೆ. ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.

ಕನ್ಯಾ ರಾಶಿ: ಈ ರಾಶಿಯವರ ಲಕ್ಕಿ ಕಲರ್ ಹಸಿರು ಅಥವಾ ಕಂದು. ಈ ಬಣ್ಣಗಳು ಸ್ಥಿರತೆ ಮತ್ತು ಬೆಳವಣಿಗೆಯನ್ನು ಪ್ರತಿನಿಧಿಸುವ ಬಣ್ಣಗಳಾಗಿದೆ. ಈ ಬಣ್ಣದ ಬಟ್ಟೆಗಳನ್ನ ಕನ್ಯಾ ರಾಶಿಯವರು ಧರಿಸುವುದರಿಂದ, ಅಭಿವೃದ್ಧಿ ಕಾಣುತ್ತೀರಿ.

ತುಲಾ ರಾಶಿ: ಈ ರಾಶಿಯವರ ಲಕ್ಕಿ ಕಲರ್ ಗುಲಾಬಿ ಅಥವಾ ನೀಲಿ. ಆಕರ್ಷಕ ವ್ಯಕ್ತಿತ್ವ ಮತ್ತು ಮಾತಿನ ಮಲ್ಲರಾದ ತುಲಾ ರಾಶಿಯವರು ಗುಲಾಬಿ ಅಥವಾ ನೀಲಿ ಬಣ್ಣದ ಬಟ್ಟೆ ಧರಿಸುವುದು ಉತ್ತಮ. ಇಂಥ ಬಣ್ಣಗಳು ನಿಮ್ಮ ಆಕರ್ಷಣೆ ಹೆಚ್ಚುಗೊಳಿಸಿ, ನಿಮ್ಮ ಸ್ನೇಹಿತರ ಸಂಖ್ಯೆ ಹೆಚ್ಚಿಸುತ್ತದೆ. ನಿಮ್ಮ ಪ್ರೀತಿ ಕಾಳಜಿಯ ಗುಣವನ್ನ ತೋರಿಸಲು ಅನುಕೂಲವಾಗುತ್ತದೆ.

ವೃಶ್ಚಿಕ ರಾಶಿ: ಈ ರಾಶಿಯವರ ಲಕ್ಕಿ ಕಲರ್ ಕಪ್ಪು. ನಾಯಕತ್ವದ ಗುಣ ಹೊಂದಿರುವ ವೃಶ್ಚಿಕ ರಾಶಿಯವರು ಕಪ್ಪು ಬಣ್ಣದ ಬಟ್ಟೆ ಧರಿಸಿದರೆ, ಅವರ ಉಪಸ್ಥಿತಿ ಇನ್ನಷ್ಟು ಉತ್ತಮವಾಗಿರುತ್ತದೆ ಎಂದರ್ಥ.

ಧನು ರಾಶಿ: ಈ ರಾಶಿಯವರ ಲಕ್ಕಿ ಕಲರ್ ನೇರಳೆ. ನೇರಳೆ ಬಣ್ಣದ ಬಟ್ಟೆ ಧರಿಸುವುದರಿಂದ, ನೀವು ಮುಕ್ತ ಮನಸ್ಸಿನಿಂದ ವ್ಯವಹರಿಸಲು ಸಾಧ್ಯವಾಗುತ್ತದೆ.

ಮಕರ ರಾಶಿ: ಈ ರಾಶಿಯವರ ಲಕ್ಕಿ ಕಲರ್ ಕಂದು ಅಥವಾ ಬೂದು. ಮಕರ ರಾಶಿಯವರು ಜೀವನದಲ್ಲಿ ಮುಂದೆ ಬರಲು, ಸರಳತೆ, ತಾಳ್ಮೆ, ಉತ್ತಮ ಜೀವನ ಶೈಲಿಯ ಅವಶ್ಯಕತೆ ಇರುತ್ತದೆ. ಈ ಗುಣಗಳು ನಿಮ್ಮಲ್ಲಿ ಬರಬೇಕು ಅಂದ್ರೆ ನೀವು ಕಂದು ಅಥವಾ ಬೂದು ಬಣ್ಣದ ಬಟ್ಟೆ ಧರಿಸಬೇಕು.

ಕುಂಭ ರಾಶಿ: ಈ ರಾಶಿಯವರ ಲಕ್ಕಿ ಕಲರ್ ನೀಲಿ. ನೀಲಿ ಬಣ್ಣದ ಬಟ್ಟೆ ಧರಿಸುವುದರಿಂದ ನಿಮ್ಮಲ್ಲಿನ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚುತ್ತದೆ. ನೀವು ಚಂಚಲ ಸ್ವಭಾವದವರಾಗಿದ್ದು, ನಿಮ್ಮ ಯೋಚಿಸುವ ರೀತಿ ಆಗಾಗ ಬದಲಾಗುತ್ತದೆ. ಆದ್ರೆ ನೀವು ನೀಲಿ ಬಣ್ಣದ ಬಟ್ಟೆ ಧರಿಸಿದ್ದಲ್ಲಿ, ನಿಮ್ಮಲ್ಲಿನ ಯೋಚನಾಶಕ್ತಿ ಉತ್ತಮವಾಗಿರುತ್ತದೆ.

ಮೀನ ರಾಶಿ: ಈ ರಾಶಿಯವರ ಲಕ್ಕಿ ಕಲರ್ ತಿಳಿ ಹಸಿರು. ತಿಳಿ ಹಸಿರು ಅಂದರೆ, ಪ್ರಾಕೃತಿಕ ಬಣ್ಣ. ಈ ಬಣ್ಣದ ಬಟ್ಟೆ ಧರಿಸುವುದರಿಂದ ನಿಮ್ಮ ಎದುರಿನಲ್ಲಿರುವವರು ಎಷ್ಟೇ ಸಿಟ್ಟಿನಲ್ಲಿದ್ದರೂ, ನಿಮ್ಮ ಬಳಿ ಶಾಂತರಾಗಿ ವರ್ತಿಸುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss