Thursday, December 26, 2024

Latest Posts

‘ಬೆಸ್ಕಾಂ, ಕಂದಾಯ ಇಲಾಖೆ, ಸಾರಿಗೆ ಇಲಾಖೆ, ಸರ್ಕಾರಿ ಶಿಕ್ಷಕರಿಗೂ ಹೀಗೆ ಮಾಡ್ತೀರಾ..?’

- Advertisement -

ಖಾಸಗಿ ಶಾಲೆಗಳಲ್ಲಿ ಶುಲ್ಕ ಕಟ್ಟದಿದ್ದರೂ ಒಂದರಿಂದ ಒಂಭತ್ತನೇ ತರಗತಿ ಮಕ್ಕಳನ್ನ ಪಾಸ್ ಮಾಡಬೇಕೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದರು. ಇದನ್ನು ವಿರೋಧಿಸಿದ ಖಾಸಗಿ ಶಾಲಾ ಒಕ್ಕೂಟಗಳು ಮಾಧ್ಯಮ ಪ್ರಾಚರಕ್ಕಾಗಿ ಸಚಿವರು ಈ ರೀತಿ ಹೇಳಿಕೆ ನೀಡಿದ್ದು, ಇದನ್ನು ವಾಪಸ್ ಪಡೆಯದಿದ್ದರೆ, ಆನ್‌ಲೈನ್ ಕ್ಲಾಸ್ ರದ್ದುಪಡಿಸಿ, ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ಕುರಿತು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕ್ಯಾಮ್ಸ್, ಸಚಿವರಿಗೆ ಪತ್ರ ಬರೆದಿದ್ದು, ಖಾಸಗಿ ಶಾಲೆಗಳು ಸಂಕಷ್ಟದಲ್ಲಿದೆ. ಕಳೆದ ವರ್ಷ ಫೀಸ್ ಪೂರ್ತಿಯಾಗಿ ವಸೂಲಿಯಾಗಿಲ್ಲ. ಈ ವರ್ಷ ಇನ್ನೂ ಶೇ.60ರಷ್ಟು ಶುಲ್ಕ ಬರುವುದು ಬಾಕಿ ಇದೆ. ಶಿಕ್ಷಣ ಸಂಸ್ಥೆಗಳನ್ನ ಮುಚ್ಚಬೇಕೋ..? ಉಳಿಸಬೇಕೋ..? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ ಸಚಿವರ ತಮ್ಮ ಹೇಳಿಕೆ ಹಿಂಪಡೆಯಬೇಕು. ಇಂಥ ಹೇಳಿಕೆಯಿಂದ ಖಾಸಗಿ ಶಿಕ್ಷಕರ ಸ್ಥಿತಿ ಬೀದಿಗೆ ಬಂದು ನಿಂತಿದೆ. ಖಾಸಗಿ ಶಾಲಾ ಶಿಕ್ಷಕರಿಗೆ ನೀವು ವೇತನ ನೀಡುತ್ತೀರಾ..? ಖಾಸಗಿ ಶಾಲೆಯಲ್ಲಿ ಶುಲ್ಕ ತೆಗೆದುಕೊಳ್ಳದಂತೆ, ಬೆಸ್ಕಾಂ, ಕಂದಾಯ ಇಲಾಖೆ, ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಯಾವುದೇ ಶುಲ್ಕ ಪಡೆಯದಂತೆ ಆದೇಶ ನೀಡಿ. ಸರ್ಕಾರಿ ಶಾಲೆಗಳು ಮುಚ್ಚಿವೆ. ಸರ್ಕಾರಿ ಶಿಕ್ಷಕರಿಗೆ ವೇತನ ನೀಡುವುದು ನಿಲ್ಲಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.

- Advertisement -

Latest Posts

Don't Miss