- Advertisement -
ರಾಜ್ಯದ 30 ಜಿಲ್ಲೆಗಳ ಗ್ರಾಮ ಪಂಚಾಯಿತಿ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. 5762 ಗ್ರಾಮ ಪಂಚಾಯತಿಗೆ ಮತ್ತು 92121 ಸದಸ್ಯರಿಗೆ ಚುನಾವಣೆ ನಡೆಯಲಿದೆ.

ದಿನಾಂಕ 22-12-2020ರಂದು ಮೊದಲ ಹಂಚದ ಚುನಾವಣೆ ನಡೆದರೆ, ದಿನಾಂಕ 27-12-2020ರಂದು ಎರಡನೇಯ ಹಂತದ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 2,930 ಪಂಚಾಯತಿಗಳಿಗೆ ಚುನಾವಣೆಯಾದರೆ, ಎರಡನೇ ಹಂತದಲ್ಲಿ 2832 ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ.
ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ಡಿಸೆಂಬರ್ 11ರಂದು ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ನಾಮಪತ್ರ ಪರಿಶೀಲನೆಗೆ ಡಿಸೆಂಬರ್ 16 ಕೊನೆ ದಿನವಾಗಿದೆ. ಡಿಸೆಂಬರ್ 30ಕ್ಕೆ ಪಂಚಾಯಿತಿ ಚುನಾವಣೆ ಫಲಿತಾಂಶ ಹೊರಬೀಳಲಿದೆ.
ನಾಗೇಂದ್ರ ಆರುಡಿ, ಕರ್ನಾಟಕ ಟಿವಿ, ಬೆಂಗಳೂರು
- Advertisement -