ಉಡುಪಿಯ ಕೃಷ್ಣಮಠದಲ್ಲಿ ಕನ್ನಡ ಫಲಕವನ್ನ ತೆಗೆದುಹಾಕಿ, ತುಳು ಮತ್ತು ಸಂಸ್ಕೃತ ಲಿಪಿಯಲ್ಲಿ ಫಲಕ ಹಾಕಲಿದ್ದು, ತೀವ್ರ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸಿದ್ದು, ತುಳು ನಮ್ಮ ರಾಜ್ಯಕ್ಕೆ ಸೇರಿದ ಭಾಷೆ ಎಂದು ನಾವು ಒಪ್ಪಿಕೊಳ್ಳುತ್ತೇವೆ. ಆದ್ರೆ ತುಳುವಿಗಾಗಿ ಕನ್ನಡವನ್ನ ಕಡೆಗಣಿಸಿದ್ದು ಸರಿಯಲ್ಲ. ಇದು ತುಂಬ ಬೇಸರದ ಸಂಗತಿ ಎಂದಿದ್ದಾರೆ.

ಸಮಾಜಕ್ಕೆ ಬುದ್ಧಿ ಹೇಳುವ ಧಾರ್ಮಿಕ ಸಂಸ್ಥೆ ಹೀಗೆ ಮಾಡುವುದು ಸರಿಯಲ್ಲ. ಈ ಬಗ್ಗೆ ದೂರು ನೀಡಲಾಗುತ್ತದೆ ಎಂದು ಸಹ ಕೆಲವರು ಹೇಳಿದ್ದಾರೆ. ಆದ್ರೆ ಈ ಬಗ್ಗೆ ಕೃಷ್ಣ ಮಠದ ಆಡಳಿತ ಮಂಡಳಿಯವರು ಸ್ಪಷ್ಟನೆ ನೀಡಿದ್ದಾರೆ.
ಕನ್ನಡವನ್ನ ಖಂಡಿತ ಕಡೆಗಣಿಸಿಲ್ಲ. ಕೃಷ್ಣ ಮಠವನ್ನ ಪುನಶ್ಚೇತನಗೊಳಿಸಲಾಗುತ್ತಿದೆ. ಹಾಗಾಗಿ ಪ್ಲಾಸ್ಟಿಕ್ ಬೋರ್ಡ್‌ಗಳನ್ನ ತೆಗೆದು, ಮರದ ಬೋರ್ಡ್ ಹಾಕಲಾಗುತ್ತಿದೆ. ತುಳು ಮತ್ತು ಸಂಸ್ಕೃತ ಲಿಪಿಯಲ್ಲಿರುವ ಬೋರ್ಡ್ ಮೊದಲೇ ರೆಡಿಯಾದ ಕಾರಣ ಅದನ್ನ ಮೊದಲೇ ಹಾಕಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಬೋರ್ಡ್ ರೆಡಿಯಾಗುತ್ತಿದೆ. ಅದು ರೆಡಿಯಾದ ಬಳಿಕ, ಅದನ್ನೂ ಕೂಡ ತಂದುಹಾಕಲಾಗುತ್ತದೆ. ನಾವು ಖಂಡಿತ ಕನ್ನಡವನ್ನ ಕಡೆಗಣಿಸಿಲ್ಲ, ಕಡೆಗಣಿಸುವುದಿಲ್ಲ ಎಂದಿದ್ದಾರೆ.