ಪ್ರತಿ ವರ್ಷದಂತೆ ಈ ಬಾರಿ ನ್ಯೂ ಇಯರ್ ಸೆಲೆಬ್ರೇಷನ್ ಜೋರಾಗಿ ಇರೋದಿಲ್ಲ. ಕಾರಣ ಕೊರೊನಾ. ಸೆಲೆಬ್ರೇಷನ್ ಇಲ್ಲಾ ಅಂದ್ರೂ ನಮ್ಮ ಜನ ಡಿಸೆಂಬರ್ 31ರ ರಾತ್ರಿ ಹೊರಗೆ ಬಂದೇ ಬರ್ತಾರೆ. ಪಾರ್ಟಿ ಮಾಡೇ ಮಾಡ್ತಾರೆ ಅಂತಾ ನಮ್ಮ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಡಿ.26ರಿಂದ ಜನವರಿ1ರವೆರೆಗೆ ಪ್ರತಿದಿನ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿ ಮಾಡಿದೆ. ಈ ಮೂಲಕ ಪಾರ್ಟಿಪ್ರಿಯರಿಗೆ ಶಾಕ್ ನೀಡಿದೆ.


ಕೆಲ ದಿನಗಳ ಹಿಂದೆ ಕೊಂಚ ಮಟ್ಟಿಗೆ ಕಡಿಮೆಯಾಗಿದ್ದ ಕೊರೊನಾ ಮತ್ತೆ ವಕ್ಕರಿಸುವ ಸಾಧ್ಯತೆ ಇದೆ. ಅಲ್ಲದೇ ಫೆಬ್ರವರಿಗೆ ಮತ್ತೆ ಎರಡನೇ ಕೊರೊನಾ ಅಲೆ ಬರುವ ಸಾಧ್ಯತೆ ಇದೆ. ಈ ಕಾರಣಕ್ಕೆ ಮೋಜು ಮಸ್ತಿಗೆಲ್ಲ ಅವಕಾಶ ನೀಡುವುದು ಸರಿಯಲ್ಲ ಎಂಬ ಕಾರಣಕ್ಕೆ. ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಇಷ್ಟೇ ಅಲ್ಲದೇ, ಜನವರಿ ಫೆಬ್ರವರಿಯಲ್ಲಿ ಜಾತ್ರೆಗಳು ನಡೆಯುತ್ತದೆ. ಜಾತ್ರೆಯಲ್ಲಿ ಜನಜಂಗುಳಿಯಾಗಿ, ವೈರಸ್ ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಡಿ.26ರಿಂದಲೇ, ಪಾರ್ಟಿ, ಜಾತ್ರೆ, ಮೆರವಣಿಗೆ ಎಲ್ಲದಕ್ಕೂ ಬ್ರೇಕ್ ಹಾಕಲು ಸರ್ಕಾರ ನಿರ್ಧರಿಸಿದೆ.