ಕೇಂದ್ರ ಸರ್ಕಾರ ಮೊದಲು ದೇಶದ ಎಲ್ಲಾ ಜನರಿಗೂ ಕೊರೊನಾ ವ್ಯಾಕ್ಸಿನ್ ನೀಡುತ್ತೇವೆ ಅಂತಾ ಹೇಳಿದ್ದು, ಈಗ ನಾವು ಹಾಗೇ ಹೇಳಲೇ ಇಲ್ಲ ಎಂದು ಹೇಳುತ್ತಿದೆ ಎಂಬುದು ಹಲವರ ಆರೋಪವಾಗಿದೆ. ಇದೇ ರೀತಿ ಮಾಜಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.


ಮೊದಲು ಕೇಂದ್ರ ಸರ್ಕಾರ ದೇಶದ ಎಲ್ಲಜನರಿಗೂ ವ್ಯಾಕ್ಸಿನ್ ನೀಡಲಾಗುವುದು ಎಂದು ಹೇಳಿದ್ದರು. ಎಲೆಕ್ಷನ್ ವೇಳೆಯಲ್ಲಿ ಬಿಹಾರದಲ್ಲಿ, ಎಲ್ಲ ಬಿಹಾರಿ ಪ್ರಜೆಗಳಿಗೆ ವ್ಯಾಕ್ಸಿನ್ ಸಿಗುತ್ತದೆ ಎಂದ ಹೇಳಲಾಗಿತ್ತು. ಆದ್ರೆ ಈಗ ನಾವು ಎಲ್ಲರಿಗೂ ವ್ಯಾಕ್ಸಿನ್ ನೀಡುತ್ತೇವೆ ಅಂತಾ ಎಲ್ಲಿ ಹೇಳಿದ್ದೇವು ಅಂತಾ ಹೇಳುತ್ತಿದೆ. ಹಾಗಾದ್ರೆ ಕೇಂದ್ರ ಸರ್ಕಾರದ ಸ್ಪಷ್ಟನೆ ಏನು ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ಈ ಮೊದಲು ಬಿಹಾರ ಚುನಾವಣಾ ಪ್ರಣಾಳಿಕೆಯಲ್ಲಿ ಕೊರೊನಾ ವ್ಯಾಕ್ಸಿನ್‌ನನ್ನು ಎಲ್ಲರಿಗೂ ಉಚಿತವಾಗಿ ನೀಡಲಾಗುವುದು ಎಂದು ಬರೆಯಲಾಗಿತ್ತು. ಬಿಜೆಪಿಗೆ ಓಟ್ ಹಾಕದವರಿಗೆ ವ್ಯಾಕ್ಸಿನ್ ನೀಡಲಾಗುವುದಿಲ್ಲವೇ ಎಂದು ಕೇಲವರು ಪ್ರಶ್ನಿಸಿದ್ದರು. ಅಲ್ಲದೇ, ಕೊರೊನಾ ವ್ಯಾಕ್ಸಿನ್ ಬಿಜೆಪಿಯ ಪಾಲಿಗೆ ಚುನಾವಣಾ ವಸ್ತುವಾಗಿರುವುದು ನಿಜಕ್ಕೂ ದುರಂತ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು.