Saturday, March 15, 2025

Latest Posts

‘ಸಿದ್ದರಾಮಯ್ಯನವರೇ ಏಕವಚನದಲ್ಲಿ ಮಾತನಾಡೋದು ಬಿಡಿ’

- Advertisement -

ಮೈಸೂರು: ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಕೆಲ ಸಲಹೆಗಳನ್ನ ಕೊಟ್ಟಿದ್ದಲ್ಲದೇ, ಕುರುಬ ಸಮುದಾಯದವರ ಜೊತೆ ಹೋರಾಟಕ್ಕೆ ನಿಲ್ಲಿ ಎಂದು ಮನವಿ ಮಾಡಿದ್ದಾರೆ.

ಸಿದ್ದರಾಮಯ್ಯನವರೇ ಏಕವಚನದಲ್ಲಿ ಮಾತನಾಡೋದು ಬಿಡಿ. ಎಲ್ಲರನ್ನು ಏಕವಚನದಲ್ಲಿ ಮಾತನಾಡಿಸಬೇಡಿ. ನಾನು ನಿಮಗಿಂತ ರಾಜಕೀಯದಲ್ಲಿ ಹಿರಿಯ. ನನ್ನ ಸಲಹೆ ಸ್ವೀಕರಿಸಿ. ಮುಂದೆಯಾದರು ಎಲ್ಲರನ್ನ ಬಹುವಚನದಲ್ಲಿ ಮಾತನಾಡಿಸಿ. ದೇವಾರಾಜ್ ಅರಸ್ ಅವರಂತೆ ಎಲ್ಲರನ್ನು ಗೌರವಿಸೋದು ಕಲಿರಿ ಎಂದು ವಿಶ್ವನಾಥ್ ಸಲಹೆ ನೀಡಿದ್ದಾರೆ.

ನೀವು ಸಿಎಂ ಆಗಲು ನಮ್ಮ ಸಮುದಾಯದವರು ಕುರಿ ಮಾರಿದ್ದಾರೆ. ನಾವು ಯಾರನ್ನು ಟಾರ್ಗೆಟ್ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರನ್ನು ಸಮುದಾಯ ಎಂದು ಅಗೌರವವಾಗಿ ಕಂಡಿಲ್ಲ. ಅವರ ನಾಯಕತ್ವಕ್ಕೆ ಬೆಲೆ ಬಂದಿದ್ದು ಮಠಗಳನ್ನು ಮಾಡಿದ್ದರಿಂದ. ಹೋರಾಟ ಮಾಡಿದ ಕಾರಣಕ್ಕೆ ಅವರಿಗೆ ಬಲ ಬಂದಿದೆ. ಸಮುದಾಯವನ್ನು ಸರ್ವಾಂಗೀಣ ಬೆಳವಣಿಗೆ ಬಳಸಿಕೊಂಡಿದ್ದೀರಾ. ಅವರ ಪರ ಹೋರಾಟಕ್ಕೆ ಏಕೆ ಹಿಂದೇಟು ಹಾಕುತ್ತಿದ್ದೀರಾ? ಎಂದು ಹೆಚ್.ವಿಶ್ವನಾಥ್, ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ.

ಮಲ್ಲೇಶ್, ಮೈಸೂರು, ಕರ್ನಾಟಕ ಟಿವಿ

- Advertisement -

Latest Posts

Don't Miss