- Advertisement -
ಪತಿ ಪತ್ನಿ ಒಂದೇ ದಿನ ಹೈಕೋರ್ಟ್ ಜಡ್ಜ್‌ಗಳಾಗಿ ಪ್ರಮಾಣವಚನ ಸ್ವೀಕರಿಸಿದ ವಿಶೇಷ ಸಂದರ್ಭ ಮದ್ರಾಸ್ ಹೈಕೋರ್ಟ್‌ನಲ್ಲಿ ಜರುಗಿದೆ. ನ್ಯಾ.ಮುರುಳಿ ಶಂಕರ್ ಕುಪ್ಪುರಾಜು ಮತ್ತು ನ್ಯಾ.ತಮಿಳ್ ಸೆಲ್ವಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ದೇಶದ ನ್ಯಾಯಾಂಗ ಇತಿಹಾಸದಲ್ಲಿ ಈ ಬೆಳವಣಿಗೆ ಎರಡನೇಯದ್ದಾಗಿದೆ. ಈ ಮೊದಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ವಿವೇಕ್ ಪುರಿ ಮತ್ತು ಅರ್ಚನಾ ಪುರಿ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದ್ದರು.

ಇನ್ನು ಮದ್ರಾಸ್ ಹೈಕೋರ್ಟ್‌ನಲ್ಲಿ 13 ಮಹಿಳಾ ನ್ಯಾಯಮೂರ್ತಿಗಳಿರುವುದು ವಿಶೇಷ ಸಂಗತಿ. ಒಟ್ಟು 8 ಮಂದಿ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದವರ ಪೈಕಿ, ನ್ಯಾ.ಮುರುಳಿ ಮತ್ತು ನ್ಯಾ.ತಮಿಳ್ ಸೆಲ್ವಿ ಕಿರಿಯರು. ಮುಂದಿನ ಎರಡು ವರ್ಷಗಳಲ್ಲಿ ಅವರಿಬ್ಬರು ಪೂರ್ಣಪ್ರಮಾಣದ ನ್ಯಾಯಮೂರ್ತಿಗಳಾಗಿ ನೇಮಕಗೊಂಡಲ್ಲಿ ನ್ಯಾಯಮೂರ್ತಿ ದಂಪತಿಗೆ 10 ವರ್ಷಗಳ ಸೇವಾವಧಿ ಹೈಕೋರ್ಟ್‌ನಲ್ಲಿ ಲಭಿಸಿದಂತಾಗುತ್ತದೆ.

- Advertisement -