Saturday, March 15, 2025

Latest Posts

ರಾಧಾ ಕೃಷ್ಣ ಧಾರಾವಾಹಿಯ ಫ್ಯಾನ್ ಮಾಡಿದ್ದೇನು ಗೊತ್ತಾ..?

- Advertisement -

ಕೆಲ ಸಿನಿ ಪ್ರಿಯರು, ಧಾರಾವಾಹಿ ಪ್ರಿಯರು ತಮ್ಮ ನೆಚ್ಚಿನ ನಟ ನಟಿಯರನ್ನ ತುಂಬಾ ಮನಸ್ಸಿಗೆ ಹಚ್ಚಿಕೊಂಡುಬಿಟ್ಟಿರ್ತಾರೆ. ಕೆಲವರಂತೂ ತಮ್ಮ ನೆಚ್ಚಿನ ನಟ ನಟಿಯರಿಗೆ ಮದುವೆಯಾದ್ರೆ, ತಾವು ಮನನೊಂದು ಜೀವಕ್ಕೆ ಅಪಾಯ ತಂದುಕೊಳ್ಳೋದು, ನೆಚ್ಚಿನ ನಟ, ನಟಿಯರಿಗೆ ಬರ್ತ್‌ಡೇ ವಿಶ್ ಮಾಡೋಕ್ಕೆ ಆಗಿಲ್ಲಾ ಅಂತಾ ಜೀವ ಕಳೆದುಕೊಳ್ಳುವುದು ಇತ್ಯಾದಿ ಕೆಲಸಗಳನ್ನ ಮಾಡಿರುವ ಉದಾಹರಣೆ, ಸಾಕಷ್ಟಿದೆ.

ಇನ್ನು ಈ ಲಾಕ್‌ಡೌನ್ ಟೈಮ್ನಲ್ಲಿ ಹಿಂದಿಯ ರಾಧಾ ಕೃಷ್ಣ ಧಾರಾವಾಹಿ ಕನ್ನಡಕ್ಕೆ ಡಬ್ ಆಗಿತ್ತು. ತುಂಬಾ ಜನ ಈ ಧಾರಾವಾಹಿಯನ್ನ ಮೆಚ್ಚಿಕೊಂಡಿದ್ರು. ರಾಧಾ ಕೃಷ್ಣರ ಮುದ್ದುಜೋಡಿಯನ್ನ ಇಷ್ಟಪಟ್ಟಿದ್ರು. ಆದ್ರೆ ಒಬ್ಬ ಬಾಲಕಿ ಮಾತ್ರ ಈ ಧಾರಾವಾಹಿಗೆ ಎಷ್ಟು ಅಡಿಕ್ಟ್ ಆಗಿದ್ದಳು ಅಂದ್ರೆ, ಈ ಧಾರಾವಾಹಿಯ ಕೃಷ್ಣ ಅಂದ್ರೆ ನಟ ಸುಮೇಧ್‌ರನ್ನ ನೋಡಲು, ಬೆಂಗಳೂರಿನಿಂದ ಒಬ್ಬಳೇ, ದೆಹಲಿಗೆ ತೆರಳಿದ್ದಾಳೆ.

13 ವರ್ಷದ ಈ ಬಾಲಕಿ ಹೆಚ್ಚು ಮೊಬೈಲ್ ಬಳಸುತ್ತಿದ್ದಳು. ಆದ್ದರಿಂದ ಮನೆಯಲ್ಲಿ ಅಪ್ಪ ಅಮ್ಮ ಬೈದಿದ್ದರು. ಈ ಕಾರಣಕ್ಕೆ ಹುಡುಗಿ ಬೆಂಗಳೂರು ರೈಲ್ವೇ ನಿಲ್ದಾಣಕ್ಕೆ ಹೋಗಿ, ಅಲ್ಲಿಂದ ದೆಹಲಿ ತೆರಳಿದ್ದಾಳೆ. ರೈಲಿನಲ್ಲಿ ಈಕೆ ಒಬ್ಬಳೇ ಇರುವುದನ್ನು ಗಮನಿಸಿದ ಸಿಬ್ಬಂದಿ ಈ ಬಗ್ಗೆ ವಿಚಾರಿಸಿದಾಗ, ನಾನು ದೆಹಲಿಯಲ್ಲಿ ಅಜ್ಜಿ ಜೊತೆ ಇರುತ್ತೇನೆ. ಲಾಕ್‌ಡೌನ್ ಸಮಯದಲ್ಲಿ ಇಲ್ಲಿಗೆ ಬಂದಿದ್ದೆ, ಈಗ ಮತ್ತೆ ಹೋಗುತ್ತಿದ್ದೇನೆ. ನನ್ನನ್ನು ಕರೆದೊಯ್ಯಲು ನನ್ನ ಅಂಕಲ್ ಬರುತ್ತಾರೆ ಅಂತಾ ಹೇಳಿದ್ದಾಳೆ.

ಈಕೆಯ ಮಾತನ್ನು ಪೂರ್ತಿಯಾಗಿ ನಂಬದ ಸಿಬ್ಬಂದಿ ದೆಹಲಿ ರೈಲ್ವೆ ಸ್ಟೇಷನ್‌ನಲ್ಲಿ ಈಕೆಯನ್ನ ಹಿಂಬಾಲಿಸಿದ್ದಾರೆ. ಈಕೆಯನ್ನ ಯಾರೂ ಕರೆಯಲು ಬರದಿದ್ದಾಗ, ಈಕೆಯ ಬಳಿ ಇದ್ದ ಪುಸ್ತಕದಲ್ಲಿ ಅಪ್ಪ ಅಮ್ಮನ ನಂಬರ್ ಇತ್ತು. ಅದಕ್ಕೆ ಕರೆ ಮಾಡಿದಾಗ, ನಿಜ ಸಂಗತಿ ಬಯಲಾಗಿದೆ. ತದನಂತರ ಹುಡುಗಿಯನ್ನು ಪೋಷಕರಿಗೆ ತಲುಪಿಸಲಾಯಿತು.

ಅದಕ್ಕೂ ಮೊದಲು ಆಕೆಗೆ ಯಾಕೆ ಹೀಗೆ ಮಾಡಿದೆ ಎಂದು ಕೇಳಿದಾಗ, ನನಗೆ ರಾಧಾ ಕೃಷ್ಣ ಧಾರಾವಾಹಿ ಅಂದರೆ ಬಲು ಇಷ್ಟ, ಹಾಗಾಗಿ ನಾನು ರಾಧೆ ಕೃಷ್ಣರನ್ನು ಹುಡುಕಿ ದೆಹಲಿಗೆ ಬಂದೆ ಎಂದಿದ್ದಾಳೆ. ಅಲ್ಲದೇ, ಈಕೆ ಮಥುರೆಗೆ ಹೋಗುವ ಪ್ಲಾನ್ ಕೂಡ ಮಾಡಿದ್ದಳು ಎನ್ನಲಾಗಿದೆ.

- Advertisement -

Latest Posts

Don't Miss