Saturday, July 5, 2025

Latest Posts

ಇಡೀ ಮೇಘನಾ ರಾಜ್ ಕುಟುಂಬಕ್ಕೆ ತಗುಲಿದ ಕೊರೊನ ಸೋಂಕು..

- Advertisement -

ಕೊರೊನಾ ಮಹಾಮಾರಿ ಈಗಾಗಲೇ ಹಲವು ಜನರ ಜೀವನವನ್ನ ಹಾಳು ಮಾಡಿದೆ. ಸ್ಯಾಂಡಲ್‌ವುಡ್‌ನ ಹಲವರಿಗೆ ಕೊರೊನಾ ಬಂದು, ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾರೆ. ಇದೀಗ ಕೊರೊನಾ ಮಹಾಮಾರಿ ಮೇಘನಾರಾಜ್ ಕುಟುಂಬವನ್ನ ಆವರಿಸಿದೆ. ಪುಟ್ಟ ಚಿರು ಕಂದನಿಗೂ ಕೊರೊನಾ ತಗಲಿರುವುದು ಧೃಡಪಟ್ಟಿದೆ.

ಮೇಘನಾ ರಾಜ್, ಸುಂದರ್ ರಾಜ್, ಪ್ರಮಿಳಾ ಜೋಶಾಯ್ ಸೇರಿ ಮಗುವಿಗೂ ಕೂಡ ಕೊರೊನಾ ತಗುಲಿದೆ. ಮೊದಲು ಪ್ರಮಿಳಾ ಜೋಶಾಯ್ ಆರೋಗ್ಯ ಸರಿಯಿಲ್ಲದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರಿಗೆ ಕೊರೊನಾ ಇರುವುದು ಧೃಡಪಟ್ಟಿದೆ.

ತದನಂತರ ಮನೆಜನರೆಲ್ಲ ಕೊರೊನಾ ಟೆಸ್ಟ್ ಮಾಡಿಸಿದಾಗ, ಎಲ್ಲರಿಗೂ ಕೊರೊನಾ ಇರುವುದು ಧೃಡಪಟ್ಟಿದೆ. ಸದ್ಯ ಸುಂದರ್‌ ರಾಜ್ ಮತ್ತು ಪ್ರಮಿಳಾ ಜೋಶಾಯ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಮೇಘನಾ ಮತ್ತು ಮಗುವಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಈ ಹಿಂದೆ ನಟ ಧೃವ ಸರ್ಜಾ ಮತ್ತು ಅವರ ಪತ್ನಿಗೂ ಕೂಡ ಕೊರೊನಾ ತಗುಲಿತ್ತು. ನಂತರ ಖಾಸಗಿ ಆಸ್ಪತ್ರೆಗೆ ದಾಖಲಿದ್ದ ದಂಪತಿ, ಚಿಕಿತ್ಸೆ ಪಡೆದು ಮರಳಿದ್ದಾರೆ.

- Advertisement -

Latest Posts

Don't Miss