ಯಾರಾದರೂ ನಿಧನರಾದರೆ, ಸೂರ್ಯಾಸ್ತದ ಮುನ್ನವೇ ಅವನ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಸೂರ್ಯಾಸ್ತದ ಬಳಿಕ ಅಂತ್ಯಸಂಸ್ಕಾರ ಮಾಡುವುದು ನಿಷಿದ್ಧ ಎನ್ನಲಾಗಿದೆ. ಹಾಗಾದ್ರೆ ರಾತ್ರಿ ಅಥವಾ ಸಂಜೆ ಬಳಿಕ ಅಂತ್ಯಸಂಸ್ಕಾರ ಮಾಡಿದ್ರೆ ಏನಾಗತ್ತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಹಲವು ಉತ್ತಮ ಅಂಶಗಳನ್ನೊಳಗೊಂಡ ಗರುಡ ಪುರಾಣದಲ್ಲಿ ಈ ಬಗ್ಗೆ ಹೇಳಲಾಗಿದೆ. ಸೂರ್ಯಾಸ್ತದ ನಂತರ ಮರಣ ಹೊಂದಿದರೆ, ಮರುದಿನ ಸೂರ್ಯೋದಯವಾದ ಬಳಿಕವೇ ಅಂತ್ಯಸಂಸ್ಕಾರ ಮಾಡಲಾಗುವುದು. ಗರುಡ ಪುರಾಣದ ಪ್ರಕಾರ ಇದಕ್ಕೆ ಕಾರಣವೇನಂದ್ರೆ, ಸೂರ್ಯಾಸ್ತದ ನಂತರ ಅಂತ್ಯಸಂಸ್ಕಾರ ಮಾಡಿದ್ರೆ ಸತ್ತವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎನ್ನಲಾಗಿದೆ. ಅಲ್ಲದೇ ಮುಂದಿನ ಜನ್ಮದಲ್ಲೂ ಕೂಡ ತೊಂದರೆ ಅನುಭವಿಸುವ ಸಾಧ್ಯತೆ ಇರುತ್ತದೆ.

ಇಷ್ಟೇ ಅಲ್ಲದೇ, ಸೂರ್ಯಾಸ್ತದ ಬಳಿಕ ಸ್ವರ್ಗದ ಬಾಗಿಲು ಮುಚ್ಚುತ್ತದೆ. ಹಾಗಾಗಿ ಸೂರ್ಯಾಸ್ತದ ಬಳಿಕ ಅಂತ್ಯಸಂಸ್ಕಾರ ಮಾಡಿದ್ರೆ, ನರಕಕ್ಕೆ ಹೋಗಬೇಕಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಸಂಜೆಯಾಗುವ ಮುಂಚೆ ಅಥವಾ ಬೆಳಗ್ಗೆ ಅಥವಾ ಮಧ್ಯಾಹ್ನ ಅಂತ್ಯಸಂಸ್ಕಾರ ಮಾಡಲಾಗುತ್ತದೆ.

ಇನ್ನು ವಿಧಿವಿಧಾನವಾಗಿ ಅಂತ್ಯಸಂಸ್ಕಾರ ಮಾಡುವುದು ಅತ್ಯಗತ್ಯ ಅನ್ನುತ್ತೆ ಗರುಡ ಪುರಾಣ. ವಿಧಿ ವಿಧಾನವಾಗಿ ಎಲ್ಲಾ ಪದ್ಧತಿಗಳನ್ನ ಅನುಸರಿಸಿ, ಅಂತ್ಯಸಂಸ್ಕಾರ ಮಾಡದಿದ್ದಲ್ಲಿ, ಆ ಜೀವ ಮುಂದಿನ ಜನ್ಮದಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ. ಅಥವಾ, ಅತೃಪ್ತ ಆತ್ಮವಾಗಿ ತಿರುತ್ತದೆ. ಹಾಗಾಗಿ ಸತ್ತ ಮೇಲೆ ಪದ್ಧತಿ ಪ್ರಕಾರವಾಗಿ ಅಂತ್ಯಸಂಸ್ಕಾರ ಮಾಡಬೇಕು. ಮತ್ತು ಸೂರ್ಯೋದಯದ ನಂತರ ಮತ್ತು ಸೂರ್ಯಾಸ್ತದ ಮುನ್ನವೇ ಅಂತ್ಯಸಂಸ್ಕಾರ ಮಾಡಬೇಕು.

