ಸೂಪರ್ ಸ್ಟಾರ್ ರಜನಿಕಾಂತ್ ಪಕ್ಷದ ಹೆಸರು, ಚಿಹ್ನೆ ಯಾವುದು ಗೊತ್ತಾ…?

ಕಾಲಿವುಡ್ ಸೂಪರ್ ಸ್ಟಾರ್, ತಲೈವ, ರಜನಿಕಾಂತ್ ರಾಜಕೀಯ ಅಖಾಡಕ್ಕೆ‌ ಧುಮುಕಲು ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳ ಕೊನೆಗೆ ಅಂದ್ರೆ ಡಿಸೆಂಬರ್ 31ರಂದು ರಜನಿ ಪಕ್ಷದ ಚಿಹ್ನೆ, ಹೆಸರು ಘೋಷಣೆ ಮಾಡೋದಾಗಿ ತಿಳಿಸಿದ್ದರು.

ಆದ್ರೆ ರಜನಿಕಾಂತ್ ತಮ್ಮ ಪಕ್ಷದ ಚಿಹ್ನೆ ಅನೌನ್ಸ್ ಮಾಡುವ ಮುನ್ನವೇ ಯಾವುದು ಅನ್ನುವುದು ರಿವೀಲ್ ಆಗಿದೆ. ರಜನಿ ಪಕ್ಷದ ಚಿಹ್ನೆ, ಹೆಸರು ಏನು ಅನ್ನೋದು ಎಲ್ಲಾ ಕಡೆ ವೈರಲ್ ಆಗ್ತಿದೆ. ತಲೈವ ಪಕ್ಷದ ಹೆಸರನ್ನು ‘ಮಕ್ಕಳ್ ಸೇವೈ ಕಚ್ಚಿ’ ಎಂದು ಚುನಾವಣಾ ಆಯೋಗದ ಬಳಿ ನೊಂದಾವಣಿ ಮಾಡಿಸಿದ್ದು, ಆಟೋ ರಿಕ್ಷಾವನ್ನು ಚಿಹ್ನೆಯಾಗಿ ಬಳಸಿದ್ದಾರೆ ಎನ್ನಲಾಗ್ತಿದೆ.

ಹಾಗ್ ನೋಡಿದ್ರೆ ರಜನಿಕಾಂತ್ ಭಾಷಾ ಸಿನಿಮಾದಲ್ಲಿ ಆಟೋ‌ ಡ್ರೈವರ್ ಆಗಿ‌ ನಟಿಸಿ ತಮ್ಮ‌ ಖದರ್ ತೋರಿಸಿದ್ರು.‌ ಅಭಿಮಾನಿಗಳು ಶಿವಾಜಿರಾವ್ ಅವತಾರ ನೋಡಿ‌ ಫಿದಾ ಆಗಿದ್ರು. ಇದೀಗ ರಜನಿ ಆಟೋ ರೀಕ್ಷಾವನ್ನು‌ ತಮ್ಮ‌ ಪಕ್ಷದ ಚಿಹ್ನೆಯಾಗಿ ಬಳಿಸಿಕೊಂಡಿರುವುದು ತಲೈವನ ಭಕ್ತಗಣಕ್ಕೆ ಸಖತ್ ಖುಷಿ ಕೊಟ್ಟಿದೆ.

About The Author