Saturday, April 19, 2025

Latest Posts

ಲಾಕ್ ಡೌನ್ ಬಳಿಕ 25 ದಿನ‌ ಪೂರೈಸಿದ ಕನ್ನಡ ಸಿನಿಮಾ ಇದು…!

- Advertisement -

ಕೊರೋನಾ ಲಾಕ್ ಡೌನ್ ಬಳಿಕ ಸಿನಿಮಾ ಥಿಯೇಟರ್ ಓಪನ್ ಗೆ ಪರ್ಮಿಷನ್ ಸಿಕ್ತು. ರೂಲ್ಸ್ ಅಂಡ್ ರೆಗ್ಯುಲೇಷನ್ ಹಾಕಿ ಸಿನಿಮಾ ರಿಲೀಸ್ ಮಾಡೋದಿಕ್ಕೆ ಸರ್ಕಾರವೇನೋ ಅವಕಾಶ ನೀಡ್ತು. ಆದ್ರೆ ಸಿನಿಮಾ ರಿಲೀಸ್ ಮಾಡಿದ್ರೆ ಪ್ರೇಕ್ಷಕಪ್ರಭು ಬರ್ತಾನಾ..? ಯಾರು‌ ಮೊದಲು ಸಿನಿಮಾ ರಿಲೀಸ್ ಮಾಡ್ತಾರೆ..? ಅನ್ನೋ ಚರ್ಚೆ ನಡುವೆ ರೀ-ರಿಲೀಸ್ ಆದ ಸಿನಿಮಾಗಳು ಥಿಯೇಟರ್ ಅಂಗಳಕ್ಕೆ ಬಂದ್ವು. ಸಿನಿಪ್ರೇಕ್ಷಕ ಕೂಡ ಬಂದರು. ಆ ನಡುವೆ ಸೌತ್ ಸಿನಿಮಾ ಇಂಡಸ್ಟ್ರೀಯಲ್ಲಿ ಲಾಕ್ ಡೌನ್ ಬಳಿಕ ಮೊದಲ‌ ಕನ್ನಡ ಸಿನಿಮಾ ಬೆಳ್ಳಿಪರದೆಯ ಮೇಲೆ ರಾರಾಜಿಸೋದಿಕ್ಕೆ ಬಂತು ಅದುವೇ ಆಕ್ಟ್ 1978.

ಒಳ್ಳೆ ಕಥೆ ಕೊಟ್ರೆ ಪ್ರೇಕ್ಷಕ ಬರ್ತಾನೆ ಅನ್ನೋ ಭರವಸೆ ಹೊತ್ತು ಆಕ್ಟ್ 1978 ಸಿನಿಮಾ ಟೀಂ ಸಿನಿಮಾ ರಿಲೀಸ್ ಮಾಡ್ತು. ಆ ನಿರೀಕ್ಷೆ ಹುಸಿಯಾಗಲಿಲ್ಲ. ಇದೀಗ ಆಕ್ಟ್ 1978 ಸಿನಿಮಾ 25 ದಿನ‌‌ ಕಂಪ್ಲೀಟ್ ಮಾಡಿ 50 ದಿನದತ್ತ ಮುನ್ನುಗುತ್ತಿದೆ.

ಸಿನಿಮಾ ಇಪ್ಪತ್ತೈದು ದಿನ‌ ಪೂರೈಸಿದ ಸಕ್ಸಸ್ ಖುಷಿಯನ್ನು ನಿರ್ದೇಶಕ ಮಂಸೋರೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ಗೆಲುವಿಗೆ ಕಾರಣರಾದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.

ಅಂದ್ಹಾಗೆ, ನವೆಂಬರ್ 20 ರಂದು ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದ ಆಕ್ಟ್ 1978 ಸಿನಿಮಾವನ್ನು‌ ಪ್ರೇಕ್ಷಕ ಅಪ್ಪಿ-ಒಪ್ಪಿಕೊಂಡಿದ್ದಾನೆ.

ಇನ್ನೂ ದೇವರಾಜ್ ಆರ್ ಈ ನಿರ್ಮಾಣದ ಈ ಚಿತ್ರದಲ್ಲಿ ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಬಿ. ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ್, ಶರಣ್ಯಾ, ಶೋಭರಾಜ್, ಅವಿನಾಶ್, ರಾಘು ಶಿವಮೊಗ್ಗ ಮುಂತಾದವರು ನಟಿಸಿದ್ದಾರೆ.

-ಮೇಘ.ಎಸ್

- Advertisement -

Latest Posts

Don't Miss