- Advertisement -
ಕೊರೋನಾ ಲಾಕ್ ಡೌನ್ ಆದಾಗಿನಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫಾರಂ ಹೌಸ್ ನಲ್ಲಿಯೇ ಕಾಲ ಕಳೆಯುತ್ತಿದ್ರು. ಅನ್ ಲಾಕ್ ಆಗ್ತಿದ್ದಂತೆ ದಚ್ಚು ತಮ್ಮ ಗಜಪಡೆ ಟೀಂನೊಂದಿಗೆ ಜಾಲಿ ರೈಡ್ ಮಾಡ್ತಿದ್ದಾರೆ. ಮೊನ್ನೆಯಷ್ಟೇ ಮಡಿಕೇರಿಗೆ ಹೋಗಿದ್ದ ಗಜಪಡೆ ಇಂದು ದೇವರನಾಡಿನತ್ತ ಹೊರಟಿದೆ.
ಶೂಟಿಂಗ್ ಅಂತಾ ಸದಾ ಬ್ಯೂಸಿ ಇರ್ತಿದ್ದ ದಚ್ಚು ಈಗ ಗೆಳೆಯರ ಜೊತೆ ಟೈಮ್ ಸ್ಪೆಂಡ್ ಮಾಡ್ತಿದ್ದಾರೆ. ಮೈಸೂರಿನಲ್ಲಿದ್ದ ದರ್ಶನ್ ಅಂಡ್ ಟೀಂ ಅಲ್ಲಿಂದ ನೇರವಾಗಿ ದೇವರನಾಡು ಕೇರಳದ ವೈನಾಡಿಗೆ ಹೊರಟಿದ್ದಾರೆ.
ಈ ಗಜಪಡೆಯಲ್ಲಿ ನಿರ್ಮಾಪಕ ಉಪಮಾತಿ, ಚಿಕ್ಕಣ್ಣ, ಪ್ರಜ್ವಲ್ ಮುತ್ತಿತತರು ಸೇರಿಕೊಂಡಿದ್ದು, ಈ ಗಜಪಡೆಯ ಸಾರಥ್ಯವನ್ನು ಸ್ವತಃ ಸಾರಥಿ ದಚ್ಚು ವಹಿಸಿಕೊಂಡಿದ್ದಾರೆ.
ಈ ವರ್ಷ ನೋ ಶೂಟಿಂಗ್ ಅಂದಿರೋ ಡಿಬಾಸ್ ರಾಜವೀರ ಮದಕರಿ ಸಿನಿಮಾದ ಶೂಟಿಂಗ್ ಮುಂದಿನ ವರ್ಷದ ಜನವರಿಯಿಂದ ಶುರುವಾಗಲಿದೆ.
- Advertisement -