ಬಿಗ್ ಬಿ ಅಮಿತಾಬಚ್ಚನ್ ನಡೆಸಿಕೊಡುವ ಕೋನ್ ಬನೇಗಾ ಕರೋಡ್ ಪತಿ ರಿಯಾಲಿಟಿ ಶೋನಲ್ಲಿ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ಅನಮಯ ಯೋಗೀಶ್ ದಿವಾಕರ್ ಅವರು ಭಾಗವಹಿಸಿದ್ದು, 50 ಲಕ್ಷ ಬಹುಮಾನ ಪಡೆದು ಬಂದಿದ್ದಾರೆ.

ಈ ವಾರ ನಡೆದ ಸ್ಟೂಡೆಂಟ್ ವೀಕ್ ಸ್ಪೆಶಲ್‌ನಲ್ಲಿ ಅನಮಯ ಭಾಗವಹಿಸಿದ್ದರು. ಅದರಲ್ಲಿ ಸೆಲೆಕ್ಟ್ ಆಗಿದ್ದ ಅನಮಯ 14 ಪ್ರಶ್ನೆಗಳಿಗೆ ಉತ್ತರಿಸಿ 50 ಲಕ್ಷ ರೂಪಾಯಿ ಗೆದ್ದಿದ್ದಾರೆ. ಆದ್ರೆ ಒಂದು ಕೋಟಿ ರೂಪಾಯಿಯ 15ನೇ ಪ್ರಶ್ನೆಗೆ ಉತ್ತರಿಸಲಾಗದೇ, ಅನಮಯ ಆಟ ಕ್ವಿಟ್ ಮಾಡಿದ್ದಾರೆ.

ಹಲವಾರು ಬುದ್ಧಿವಂತ ಮಕ್ಕಳ ಮಧ್ಯೆ ಹಾಟ್‌ಸೀಟ್‌ನಲ್ಲಿ ಕುಳಿತು ಆಟವಾಡುವ ಅವಕಾಶ ಪಡೆದ ಅನಮಯ ತುಂಬಾ ಚೆನ್ನಾಗಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದರು. ಕೊನೆಯ ಪ್ರಶ್ನೆಗೆ ಕರೆಕ್ಟ್ ಆಗಿ ಉತ್ತರ ಗೊತ್ತಿಲ್ಲದ ಕಾರಣ ಲೈಫ್‌ಲೈನ್ ಬಳಸದೇ ಆಟ ಬಿಟ್ಟುಕೊಟ್ಟಿದ್ದಾರೆ. ಇನ್ನು ಈ ಬಗ್ಗೆ ಅನಮಯ ಪೋಷಕರು ಸಂತಸ ವ್ಯಕ್ತಪಡಿಸಿದ್ದು, ಅನಮಯ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
