ಬೆಂಗಳೂರು : ಡಿಸೆಂಬರ್ ತಿಂಗಳು ಬಂತು ಅಂದ್ರೆ ಸಾಕು ಎಲ್ಲೆಲ್ಲೂ ಕ್ರಿಸ್ಮಸ್ ಹಾಗೂ ನ್ಯೂ ಇಯರ್ ಆಚರಿಸಲು ಬಗೆ ಬಗೆಯ ಕೇಕ್‌ಗಳು ಎಲ್ಲೆಡೆ ಸಜ್ಜಾಗುತ್ತೆ.. ಅದರಲ್ಲೂ ಕೇಕ್ ಪ್ರಿಯರು ಕಾತುರದಿಂದ ಕಾಯುವ ಕೇಕ್ ಶೋ ಆಂಭವಾಗಿದೆ.. ಈ ಬಾರಿ ವಿಭಿನ್ನ ಹಾಗೂ ಪ್ರಸ್ತುತ ವಿಧ್ಯಮಾನದ ಥೀಮ್‌ನೊಂದಿಗೆ ಕೇಕ್ ಶೋ ಆಯೋಜಿಸಲಾಗಿದೆ..

ಈ ಬಾರಿಯ ಕೇಕ್ ಶೋನ ಮಕ್ಕಳಿಗಾಗಿ ಮೀಸಲಿಡಲಾಗಿದೆ.. ಲಾಕ್‌ಡೌನ್ ನಂರತವೂ ಶಾಲಾ ಮಕ್ಕಳು ಮನೆಯಿಂದ ಹೊರಗೆ ಬರಲಾಗುತ್ತಿಲ್ಲ.. ಮನೆಯಲ್ಲೆ ಇದ್ದು ಬೋರ್ ಆಗುತ್ತಿರುವ ಮಕ್ಕಳಿಗಾಗಿ ಈ ಸಲ ಕೇಕ್ ಶೋವನ್ನ ಆಯೋಜಿಸಲಾಗಿದೆ.. ಇನ್ನು ಥೀಮ್‌ನ ಕೂಡ ಮಕ್ಕಳಿಗಾಗಿಯೇ ಆಯೋಜಿಸಲಾಗಿದ್ದು, ಈ ಬಾರಿ ಕಾರ್ಟೂನ್‌ಗಳ ಥೀಮ್ ಇರಿಸಲಾಗಿದೆ..

ಮುಖ್ಯ ದ್ವಾರ ಪ್ರವೇಶ ಮಾಡುತ್ತಿದ್ದಂತೆ ಲಯನ್ ಕಿಂಗ್ ಚಿತ್ರದ ಒಂದು ದೃಶ್ಯವನ್ನಾಧಾರಿಸಿ ತಯಾರಿಸಿದ ಕೇಕ್, ಅದರ ಪಕ್ಕದಲ್ಲಿ ಇಟಲಿಯ ವಾಲುವ ಪೀಸ್ ಗೋಪುರ, ಕೋರೊನಾ ವೈರಸ್ ಮಾಸ್ಕ್ ಹಾಕಿರುವುದು, ನಾಟ್ಯ ದೇವರು ನಟರಾಜ್, ಮದುವೆಯ ಕೇಕ್, ಚಿನ್ನದ ಡ್ಯಾಗನ್, ಟಾಮ್ ಆ್ಯಂಡ್ ಜೆರಿ, ಗಣಪತಿ ದೇವರು, ಪ್ಯಾರಿಸ್‌ನ ಐಫೆಲ್ ಟವರ್ ಹೀಗೆ ಹತ್ತು ಹಲವು ಆಕರ್ಷಕ ಕೇಕ್‌ಗಳು ನಮ್ಮ ಕೈ ಬೀಸಿ ಕರೆಯುತ್ತವೆ.. ಅದರಲ್ಲೂ ಹೀಗೆ ನೈಜವಾಗಿರೋ ಕೇಕ್ ಲೋಕ ಧರೆಗಿಳಿದಿರೋದು ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್ ನಲ್ಲಿ..
ಡಿಸೆಂಬರ್ 17 ರಿಂದ ಜನವರಿ 3ರ ವರೆಗೆ ಭಾರತದ ಅತೀ ದೊಡ್ಡ ಕೇಕ್ ಉತ್ಸವವನ್ನು ಆಯೋಜಿಸಲಾಗಿದೆ.. ಈ ಪ್ರದರ್ಶನದಲ್ಲಿ ಶುಗರ್ ಸ್ಕಲ್ಪ್ಟ್‌ನ ಸುಮಾರು 60 ಕ್ಕೂ ಹೆಚ್ಚು ನಳಪಾಕ ಪ್ರವೀಣರು, ವಿವಿಧ ವಿನ್ಯಾಸಗಳ ಕೇಕ್‌ಗಳನ್ನ ತಯಾರಿಸಿದ್ದಾರೆ.. ಅಂದಹಾಗೆ 46 ನೇ ವರ್ಷದ ಈ ಕೇಕ್ ಶೋನಲ್ಲಿ ಸಿಂಹರಾಜನ ಬಂಡೆ, ನಟರಾಜ, ವಾಲುವ ಪೀಸಾ ಗೋಪುರ ಈ ಬಾರಿಯ ಮುಖ್ಯ ಆಕರ್ಷಣೆಯಾಗಿದೆ..

ಸುಮಾರು 9 ಅಡಿ ಅಗಲ ಹಾಗೂ 12 ಅಡಿ ಉದ್ದವಿರೋ ಈ ಕೇಕ್ ಅನ್ನ 70 ದಿನಗಳಲ್ಲಿ 6 ಜನರ ತಂಡವೊಂದು ವಿನ್ಯಾಸ ಮಾಡಿದೆ.. ಇನ್ನೂ ಕ್ರಿಸ್‌ಮಸ್ ಹ್ಬದ ಪ್ರಯುಕ್ತ ಯೇಸು ಜನನ ಹಾಗೂ ಕೊರೊನಾ ವೈರಸ್‌ಗೆ ಮಾಸ್ಕ ಹಾಕಿರುವವುದು ಬಾರಿಯ ಮತ್ತೊಂದು ಅಟ್ರಾಕ್ಷನ್ ಆಗಿದ್ದು ಕೋವಿಡ್ ಸೋಂಕಿನಿನಿಂದ ಜನರು ಆದಷ್ಟು ಸುರಕ್ಷತೆ ಕಾಪಾಡಬೇಕೆಂಬ ಸಂದೇಶ ಹೇಳಲಾದೆ..
ಇನ್ನು ನಗರದ ಮೂಲೆ ಮೂಲೆಗಳಿಂದ ಜನರು ಪ್ರವಾಸಿಗರು ಕೇಕ್ ಶೋದ ಅಂದವನ್ನ ಕಣ್ತುಂಬ್ಬಿಕೊಳ್ಳಲು ಬರುತ್ತಾರೆ.. ಹೀಗಾಗಿ ಜನರ ಹತಿ ದೃಷ್ಟಿಯಿಂದಾಗಿ ಒಂದು ಬಾರಿಗೆ ಕೇವಲ 200 ಜನರನ್ನ ಮಾತ್ರ ಪ್ರವೇಶಕ್ಕೆ ಅವಕಾಶವಿದೆ.. ಇನ್ನು ಕೇಕ್ ಶೋ ಜೊತೆ ಹಲವು ಶಾಂಪಿಂಗ್ ಮಳಿಗೆಗಳಿಗೂ ಅವಕಾಶವಿದ್ದು ಕೇವಲ ಶೇ. 50 ರಷ್ಟು ಸ್ಟಾಲ್‌ಗಳನ್ನ ಇರಿಸಲು ಅವಕಾಶ ಕಲ್ಪಿಸಲಾಗಿದೆ.. ಅಂದ್ರೆ ಪ್ರತಿ ವರ್ಷ ಸುಮಾರು 150ಮಾರಾಟ ಮಳಿಗೆಗೆ ಇರುತ್ತಿದ್ದು ಈ ಬಾರಿ ಕೇವಲ 60-65 ಮಾರಾಟ ಮಳಿಗೆಗಳಿಗೆ ಅವಕಾಶ ಇದೆ.. ಇನ್ನು ಮುಖ್ಯ ದ್ವಾರಸಲ್ಲಿ ಬಿಗಿ ಭದ್ರತೆ ಇದ್ದು ಪ್ರತಿಯೊಬ್ಬರಿಗೂ ಥರ್ಮಲ್ ಪರಿಕ್ಷೆ ನಡೆಸಿಯೇ ಒಳಗೆ ಪ್ರವೇಶಿಸಲು ಅನುವತಿ ನೀಡಲಾಗುತ್ತೆ.. ಕೋವಿಡ್‌ನಿಂದಾಗಿ ಜನರು ಆರ್ಥಿಕವಾಗಿ ತತ್ತರಿಸಿ ಹೊಗಿರುವುದ್ರಿಂದ ಪ್ರವೇಶ ದರವನ್ನ ಕೊಂಚ ಕಡಿಮೆ ಮಾಡಿಕೊಳ್ಳಲಾಗಿದ್ದು, ಪ್ರವೇಶ ದರದ ಬೆಲೆ 90 ರೂಪಾಯಿ ಮಾಡಲಾಗಿದೆ..
ಒಟ್ಟಿನಲ್ಲಿ ಪ್ರತಿಯೊಂದು ಕೇಕ್ ಕೂಡ ಒಂದೊಂದು ಕತೆಯನ್ನು ಸಾರಿ ಸಾರಿ ಹೇಳುತ್ತಿದ್ದು .. ನೀವು ಕೂಡ ಇಂತಹ ಆಕರ್ಷಕ ಕೇಕ್ ಕಲಾಕೃತಿಗಳನ್ನು ಕಣ್ಣು ತುಂಬಿಕೋಳ್ಳಬೇಕಾದ್ರೆ ಬಿಡುವು ಮಾಡಿಕೊಂಡು ಇಲ್ಲಿಗೆ ವಿಸಿಟ್ ಕೊಡಿ.. ನೀವು ಕೂಡ ಇವುಗಳನ್ನು ಪ್ರತೇಕ್ಷವಾಗಿ ನೋಡಿ ನ್ಯೂ ಇಯರ್ ಅನ್ನ ಈ ಕೇಕ್‌ಗಳ ಮೂಲಕ ಸ್ವಾಗತ ಮಾಡಿ ..