Friday, June 20, 2025

Latest Posts

ಮೇಘನಾ ಹೆಸರಿನಲ್ಲಿ ಮೂಡಿತು ಚಿರು ಫೋಟೋ… ಫೋಟೋ ನೋಡಿ ಏನಂದ್ರೂ ಗೊತ್ತಾ ಕುಟ್ಟಿಮಾ..?

- Advertisement -

ಕನ್ನಡ ಚಿತ್ರರಂಗದ ಯುವ ಸಾಮ್ರಾಟ್ ಚಿರಂಜೀವಿ ಅಗಲಿಕೆ ಬಳಿಕ ಅವರ ಅಭಿಮಾನಿಗಳು ಅವರನ್ನು ಒಂದಲ್ಲ ಒಂದು ರೀತಿ ನೆನಪು ಮಾಡಿಕೊಳ್ತಾರೆ. ತಮ್ಮ ನೆಚ್ಚಿನ ನಟನ ಚಿತ್ರ ಬರೆದು ಮೇಘನಾ ಅವರಿಗೆ ಸರ್ ಪ್ರೈಸ್ ಕೊಡ್ತಾರೆ. ಇದೀಗ ಅಭಿಮಾನಿಯೊಬ್ಬ ಮೇಘನಾ ಸರ್ಜಾ ಹೆಸರಿನಲ್ಲಿಯೇ ಚಿರು ಚಿತ್ರ ಬರೆದು ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಮೇಘನಾ ಹೆಸರಿನಲ್ಲಿ ಅರಳಿದ ಕಲಾ ಕುಂಚ ನೋಡಿ ಕುಟ್ಟಿಮಾ ಫಿದಾ ಆಗಿದ್ದಾರೆ. ಅಭಿಮಾನಿಯ ಕೈ ಚಳಕದಲ್ಲಿ ರೆಡಿಯಾಗಿರುವ ಚಿರು ಫೋಟೋ ವಿಡಿಯೋವನ್ನು ಶೇರ್ ಮಾಡಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಸದ್ಯ ಮೇಘನಾ ರಾಜ್ ತಮ್ಮ ಮುದ್ದು ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.

- Advertisement -

Latest Posts

Don't Miss