Sandalwood: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು ಸಂದರ್ಶನದಲ್ಲಿ ಮಾತನಾಾಡಿದ್ದು, ಇವರು ಜನಿಸಿದ್ದು ಮೈಸೂರಿನಲ್ಲಿ. ತಂದೆ ಮೈಸೂರಿನವರಾಗಿದ್ದು, ತಾಯಿ ಮಡಿಕೇರಿಯವರು. ಈ ಬಗ್ಗೆ ಮಾತನಾಡಿರುವ ರಮಿಕಾ ಮೈಸೂರಿನ ಬಗ್ಗೆ ಮಾತನಾಡಿದ್ದಾರೆ.
ಮೈಸೂರಿನಲ್ಲಿ ಜನಿಸಿ, ಬೆಳೆದ ರಮಿಕಾ, ಚಿಕ್ಕವಳಿದ್ದಾಗ ಹೆಚ್ಚು ಅಮ್ಮನೂರಿಗೂ ಹೋಗುತ್ತಿದ್ದರಂತೆ. ಆದರೆ ಈಗ ಕೆಲಸದ ನಿಮಿತ್ತ ಬ್ಯುಸಿಯಾಗಿರುವ ಕಾರಣಕ್ಕೆ ಊರಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಮೈಸೂರು ಮತ್ತು ಕೂರ್ಗ್ ಬಗ್ಗೆ ಮಾತನಾಡಿರು ರಮಿಕಾ, ಮೈಸೂರು ನೆಮ್ಮದಿಯ ಜಾಗ, ಮಡಿಕೇರಿ ಕನಸಿನ ತಾಣ. ಹಾಾಗಾಗಿ ನನಗೆ ಎರಡೂ ಊರಿನ ಪ್ರೀತಿ ಸಿಕ್ಕಿದೆ. ನಾನು ಲಕ್ಕಿ ಎಂದಿದ್ದಾರೆ ರಮಿಕಾ.
ಅಲ್ಲದೇ ಮಡಿಕೇರಿಯಲ್ಲಿ ಮಾಡುವ ಬಸವೇಶ್ವರ ಹಬ್ಬಕ್ಕೆ ರಮಿಕಾ ಮತ್ತು ಮನೆಯವರು ತಪ್ಪದೇ ಹಾಜರಾಗುತ್ತಾರಂತೆ. ಅಲ್ಲದೇ ಮಡಿಕೆಯ ತಂಪಿನ ವಾತಾವರಣ ಮತ್ತು ಅಲ್ಲಿನ ಬಿಸಿ ಬಿಸಿ ನಾನ್‌ವೆಜ್ ಊಟ ನನಗಿಷ್ಟಾ. ಚಿಲ್ ಮಾಡಲು ಮಡಿಕೇರಿಗೆ ಹೋಗಬಹುದು ಎನ್ನುತ್ತಾರೆ ರಮಿಕಾ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




