Monday, December 23, 2024

Latest Posts

ಬಿಗ್‌ಬಿ ಅಮಿತಾಬ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರಂತೆ ರಶ್ಮಿಕಾ..!

- Advertisement -

ಆಲ್ಬಮ್ ಸಾಂಗ್ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ರಶ್ಮಿಕಾ ಮಂದಣ್ಣ, ಇದೀಗ ಡೆಡ್ಲಿ ಚಿತ್ರದ ಮೂಲಕ ಬಿಗ್‌ಬಿ ಅಮಿತಾಬ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆಂಬ ಗುಸುಗುಸು ಹರಿದಾಡುತ್ತಿದೆ.

ನಟ ಸಿದ್ಧಾರ್ಥ್ ಮಲ್ಹೋತ್ರಾ ನಟಿಸುತ್ತಿರುವ ಮಜ್ನು ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದು, ಇದಾದ ಬಳಿಕ ಡೆಡ್ಲಿ ಅನ್ನೋ ಚಿತ್ರದಲ್ಲಿ ರಶ್ಮಿಕಾ ಅಮಿತಾಬ್ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾಳೆ ಎಂಬ ಸುದ್ದಿ ಹರಡಿದೆ. ಡೆಡ್ಲಿ ಚಿತ್ರವನ್ನ ವಿಕಾಸ್ ಬಹ್ಲ ನಿರ್ದೇಶಿಸಲಿದ್ದಾರೆ. ಇವರು ಈಗಾಗಲೇ ಕ್ವೀನ್, ಸೂಪರ್ 30 ಚಿತ್ರಗಳನ್ನು ಡೈರೆಕ್ಟ್ ಮಾಡಿದ್ದು, ಇವೆಲ್ಲ ಒಳ್ಳೆಯ ಕಲೆಕ್ಷನ್ ಗಳಿಸಿದೆ.

ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ, ತಮ್ಮ ಸಿನಿ ಜರ್ನಿಯಲ್ಲಿ ಸಖತ್ ಸಕ್ಸಸ್ ಕಂಡರು, ತೆಲಗು, ತಮಿಳು, ಇದೀಗ ಹಿಂದಿ ಚಿತ್ರಗಳಲ್ಲೂ ರಶ್ಮಿಕಾ ನಟಿಸುತ್ತಿದ್ದು, ಇವರ ಸಿನಿಪಯಣ ಉತ್ತವಾಗಿರಲಿ ಎಂದು ಮೊನ್ನೆ ತಾನೇ ರಕ್ಷಿತ್ ವಿಶ್ ಮಾಡಿದ್ದರು.

ಮೊನ್ನೆ ಮೊನ್ನೆ ತಾನೇ ರಶ್ಮಿಕಾ ಮಂದಣ್ಣಾರ ಹಿಂದಿ ಆಲ್ಬಮ್ ಸಾಂಗ್ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಬಾಲಿವುಡ್ ರ್ಯಾಪರ್ ಬಾದ್‌ಶಾ ಈ ಆಲ್ಬನ್‌ನಲ್ಲಿ ಹಾಡಿದ್ದಾರೆ.

- Advertisement -

Latest Posts

Don't Miss