Saturday, March 15, 2025

Latest Posts

ಎಸ್ ವಿಶ್ವನಾಥ್‌ಗೆ ಭಾರೀ ಶಾಕ್ ಕೊಟ್ಟ ಸುಪ್ರೀಂಕೋರ್ಟ್..

- Advertisement -

ಸಚಿವನಾಗುವ ಕನಸು ಕಂಡಿದ್ದ ಎಸ್. ವಿಶ್ವನಾಥ್‌ಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ. ವಿಶ್ವನಾಥ್ ವಿಧಾನಸಭೆಗೆ ಮರು ಆಯ್ಕೆಯಾಗುವವರೆಗೂ ಅವರಿಗೆ ಸಚಿವರಾಗುವ ಹಕ್ಕಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಮೊದಲು ಕಾಂಗ್ರೆಸ್, ನಂತರ ಜೆಡಿಎಸ್, ತದನಂತರ ಬಿಜೆಪಿ ಸೇರಿ, ಆಪರೇಶನ್ ಕಮಲ ಸಕ್ಸಸ್ ಮಾಡಲು ಸಾಥ್ ಕೊಟ್ಟವರಲ್ಲಿ ವಿಶ್ವನಾಥ್ ಕೂಡ ಒಬ್ಬರು. ಮುಂದೆ ನಾನು ಕೂಡ ಸಚಿವನಾಗ್ತೇನೆ ಎಂದುಕೊಂಡಿದ್ದ ವಿಷ್ವನಾಥ್‌ಗೆ ಬಿಜೆಪಿಯಲ್ಲೂ ಕೂಡ ಸಚಿವ ಸ್ಥಾನ ಸಿಗಲಿಲ್ಲ. ಇದೇ ಕಾರಣಕ್ಕೆ ವಿಶ್ವನಾಥ್ ಸಿಎಂ ಯಡಿಯೂರಪ್ಪ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ಸಿಡಿ ವಿಷಯವನ್ನ ಪ್ರಸ್ತಾಪಿಸಿ, ಆ ಬಗ್ಗೆಯೂ ಕೆಲ ಮಾತುಗಳನ್ನಾಡಿದರು.

ಆದ್ರೆ ಇಂದು ಈ ಬಗ್ಗೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ವಿಶ್ವನಾಥ್ ವಿಧಾನಸಭೆಗೆ ಮರು ಆಯ್ಕೆಯಾಗುವವರೆಗೂ ಅವರಿಗೆ ಸಚಿವರಾಗುವ ಹಕ್ಕಿಲ್ಲವೆಂದು ಹೇಳಿದೆ.

ವಿಶ್ವನಾಥ್ ಸಾಹಿತ್ಯ ಕ್ಷೇತ್ರದ ವಿಭಾಗದಿಂದ ವಿಧಾನಪರಿಷತ್‌ಗೆ ನಾಮ ನಿರ್ದೇಶನಗೊಂಡಿದ್ದಕಾರಣಕ್ಕೆ ಅವರು ಸಚಿವರಾಗಲು ಅನರ್ಹರು ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಪ್ರಾಯ ಪಟ್ಟಿತ್ತು.

- Advertisement -

Latest Posts

Don't Miss