ಶಿವರಾತ್ರಿ ಹಬ್ಬ ಹತ್ತಿರದಲ್ಲೇ ಇದೆ. ಈ ಶಿವರಾತ್ರಿ ಹಬ್ಬದ ಮಹತ್ವವೇನು..? ಶಿವರಾತ್ರಿ ಹಬ್ಬಕ್ಕೆ ಯಾವ ಮಂತ್ರ ಹೇಳಬೇಕು..? ಶಿವರಾತ್ರಿಯಂದು ತನಗೆ ಗೊತ್ತಿಲ್ಲದೇ, ಓರ್ವ ಚಾಂಡಾಲ ಹೆಣ್ಣು ಉಪವಾಸ ಮಾಡಿದ್ದಕ್ಕೆ ಏನಾಯಿತು..? ಇದೆಲ್ಲ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಶಿವರಾತ್ರಿ ಹಬ್ಬ ಸಮೀಪಿಸುತ್ತಿದೆ. ಬೇಸಿಗೆ ಶುರುವಾಗುವ ಮುನ್ನ ಬರುವ ಮೊದಲ ಹಬ್ಬವೇ ಶಿವರಾತ್ರಿ. ಈ ದಿನ ಶಿವನ ಭಕ್ತರು ಉಪವಾಸ ಮಾಡಿ, ಶಿವಲಿಂಗಕ್ಕೆ ಜಲಾಭಿಶೇಕ ಮಾಡಿ, ಬಿಲ್ವಪತ್ರೆಯನ್ನರ್ಪಿಸಿ, ಶಿವನಾಮಸ್ಮರಣೆ ಮಾಡುತ್ತ, ಜಾಗರಣೆ ಮಾಡುತ್ತಾರೆ. ಶಿವರಾತ್ರಿಯ ದಿನ ಚಾಂಡಲ ಹೆಣ್ಣು ಉಪವಾಸ ಮಾಡಿದ ಪರಿಣಾಮವೇನಾಯಿತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಮ್ಮೆ ಚಾಂಡಾಲ ಹೆಣ್ಣೊಬ್ಬಳು, ಶಿವರಾತ್ರಿಯ ದಿನ ಊಟ ತಿಂಡಿ, ನೀರು, ನಿದ್ದೆಯಿಲ್ಲದೇ ಊರೆಲ್ಲ ತಿರುಗಾಡಿ ಕೊನೆಗೆ ಗೋಕರ್ಣಕ್ಕೆ ಬಂದು ತಲುಪಿದಳು. ಅಲ್ಲಿ ಭಿಕ್ಷೆ ಬೇಡಿದರೂ ಆಕೆಗೆ ಅನ್ನ ನೀರು ಸಿಗಲೇ ಇಲ್ಲ. ದೇಹ ನಿತ್ರಾಣಗೊಂಡಿತ್ತು. ತಾನು ಸಾಯುವ ಸಮಯ ಸಮೀಪಿಸಿತು ಎಂದು ಆಕೆಗೆ ಅನ್ನಿಸಿದಾಗ, ಬಿಲ್ವ ಪತ್ರೆಯ ಮರದ ಕೆಳಗೆ ಹೋಗಿ ಕುಳಿತಳು. ಆಕೆಯ ಕೈ ತಾಗಿ ಬಿಲ್ವಪತ್ರೆಯ ಮರದಿಂದ ಒಂದು ದಳ ಕೆಳಗೆ ಬಿದ್ದಿತು, ಆ ದಳ ಬೀಳುವ ಜಾಗದಲ್ಲಿ ಶಿವಲಿಂಗವಿತ್ತು. ಹಾಗಾಗಿ ಆ ಬಿಲ್ವ ಪತ್ರೆ ದಳ ಶಿವಲಿಂಗದ ಮೇಲೆಯೇ ಬಿದ್ದಿತು.
ತದನಂತರ ಆಕೆ ಸಾವನ್ನಪ್ಪಿದಳು. ಯಮಕಿಂಕರರು ಬಂದು ಆಕೆಯನ್ನು ಸ್ವರ್ಗಕ್ಕೆ ಕೊಂಡೊಯ್ದರು. ಜೀವನಪೂರ್ತಿ ಬೇಡದ್ದನ್ನು ಮಾಡಿ, ಬೇರೆಯವರಿಗೆ ಹಿಂಸೆ ಕೊಟ್ಟ ಬದುಕಿದ್ದ ಆ ಹೆಣ್ಣಿಗೆ ಸ್ವರ್ಗ ಯಾಕೆ ಸಿಕ್ಕಿತು ಎಂಬ ಪ್ರಶ್ನೆಗೆ ಉತ್ತರ, ಆಕೆ ತನಗೆ ಗೊತ್ತಿಲ್ಲದೇ, ಶಿವರಾತ್ರಿ ಉಪವಾಸ ಮಾಡಿದ್ದಳು, ನಿದ್ದೆ ಗೆಟ್ಟು ಜಾಗರಣೆ ಮಾಡಿದ್ದಳು, ಮರುದಿನ ಆಕೆ ಬಿಲ್ವಪತ್ರೆಯ ಮರದ ಕೆಳಗೆ ಕುಳಿತಾಗ, ಆಕೆಯ ಕೈಯಿಂದ ಆಕೆಗೆ ಗೊತ್ತಿಲ್ಲದೇ, ಬಿಲ್ವ ಪತ್ರೆ ಶಿವಲಿಂಗದ ಮೇಲೆ ಬಿತ್ತು. ಹೀಗೆ ಶಿವರಾತ್ರಿಯ ಉಪವಾಸ, ಜಾಗರಣೆ, ಪೂಜಾ ಫಲದಿಂದ ಆ ಚಾಂಡಾಲ ಹೆಣ್ಣಿಗೆ ಸ್ವರ್ಗಪ್ರಾಪ್ತಿಯಾಯಿತು.
ಇನ್ನು ಶಿವನಿಗೆ ನೀವು ಭಕ್ಷ್ಯ ಭೋಜನವನ್ನಿಟ್ಟು ಪ್ರಾರ್ಥಿಸಬೇಕೆಂದೇನಿಲ್ಲ. ಶಂಭೋ ಎಂದು ಕರೆದರೆ ಬರುವ ಕರುಣಾಮಯಿಗೆ, ನೀರಿನ ಅಭಿಶೇಷ, ಬಿಲ್ವ ಪತ್ರೆಯನ್ನು ಅರ್ಪಿಸಿದರೆ ಸಾಕು. ಇನ್ನು ಶಿವರಾತ್ರಿಯ ದಿನ 108 ಬಾರಿ ಓಂ ನಮಃ ಶಿವಾಯ ಎಂಬ ಮಂತ್ರ ಪಠಿಸಿದರೆ, ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




