ಕನ್ನಡ ಚಿತ್ರರಂಗದಲ್ಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿಯಂತಹ ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿದ ನಿರ್ದೇಶಕ ಹೇಮಂತ್ ರಾವ್. ಇದೀಗ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿರೋ ಹೇಮಂತ್ ಟೀಂಗೆ ಬೀರ್ ಬಲ್ ಬೆಡಗಿ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆಯಷ್ಟೇ ಸಿನಿಮಾ ಟೀಂ ನಾಯಕಿಯ ಅರ್ಧ ಫೋಟೋ ಬಹಿರಂಗಪಡಿಸಿ ಕ್ಯೂರಿಯಾಸಿಟಿ ಬಿಲ್ಡ್ ಮಾಡಿತ್ತು. ಚಿತ್ರಪ್ರೇಮಿಗಳು ಕೂಡ ತಲೆಗೆ ಹೂಳ ಬಿಟ್ಕೊಂಡು ನಾಯಕಿ ಯಾರಿರಬಹುದೆಂದು ಸಾಕಷ್ಟು ಊಹೆ ಮಾಡಿದ್ರು.
ಇದೀಗ ಕೊನೆಗೂ ಸಪ್ತ ಸಾಗರಕ್ಕೆ ಒಡತಿ ಸಿಕ್ಕಿದ್ದಾರೆ. ಅವರೇ ರುಕ್ಮಿಣಿ ವಸಂತ್.
2019ರಲ್ಲಿ ಬೀರ್ ಬಲ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರುಕ್ಮಿಣಿ ವಸಂತ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ರುಕ್ಮಣಿ ಜೋಡಿಯಾಗಿ ಮಿಂಚಲಿದ್ದಾರೆ. ಈ ಸಿನಿಮಾ ಜೊತೆ ರುಕ್ಮಣಿ ಉಪೇಂದ್ರ ನಟನೆಯ ಸಿನಿಮಾವೊಂದಕ್ಕೂ ಸಹಿ ಹಾಕಿದ್ದಾರೆ. ಇನ್ನೂ, ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಪೋಸ್ಟರ್ ಗೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.