ಕೊರೋನಾ ಲಾಕ್ ಡೌನ್ ಬಳಿಕ ಸತತ ಒಂದು ವರ್ಷದ ಬಳಿಕ ಸಿನಿಮಾ ಮಂದಿರಗಳಲ್ಲಿ 100% ರಷ್ಟು ಆಸನಗಳ ಭರ್ತಿಗೆ ಕೇಂದ್ರ ಸರ್ಕಾರವೇನು ಅನುಮತಿ ಕೊಟ್ಟಿದೆ. ಆದ್ರೆ ರಾಜ್ಯ ಸರ್ಕಾರ ಈ ಆದೇಶವನ್ನು ತಡೆ ನೀಡಿ, ತಿಂಗಳಾತ್ಯಂದವರೆಗೆ 50% ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಿದೆ. ಸರ್ಕಾರದ ಈ ತೀರ್ಮಾನವನ್ನು ಗಾಂಧಿನಗರ ಮಂದಿ ಪ್ರಶ್ನಿಸ್ತಿದ್ದಾರೆ.
ಕನ್ನಡದ ನಟ, ನಿರ್ಮಾಪಕರು, ನಿರ್ದೇಶರು ಈ ಸರ್ಕಾರದ ಈ ನಡೆಯನ್ನು ಪ್ರಶ್ನಿಸ್ತಿದ್ದಾರೆ. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ದುನಿಯಾ ವಿಜಯ್, ಪ್ರಶಾಂತ್ ನೀಲ್, ಡಾಲಿ ಧನಂಜಯ್, ಶ್ರೀಮುರುಳಿ, ನಿರ್ದೇಶಕ ಸಿಂಪಲ್ ಸುನಿ, ಕಾರ್ತಿಕ್ ಗೌಡ ಸೇರಿದಂತೆ ಅನೇಕರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮಗ್ಯಾಕೆ ಅಬ್ ನಾರ್ಮಲ್..?
ಎಲ್ಲರಿಗೂ NORMAL ನಮಗ್ಯಾಕೆ ABNORMALರ್? ಥಿಯೇಟರ್ ನಲ್ಲಿ 100 ರಷ್ಟು ಆಸನ ಸಾಮರ್ಥ್ಯ ಕೊಡಿ ಎಂದು ನಟ ಶಿವರಾಜ್ ಕುಮಾರ್ ಪ್ರಶ್ನಿಸಿದ್ದಾರೆ.
ಚಿತ್ರಮಂದಿರಗಳಿಗೆ ಅನುಮತಿ ಕೊಡಿ..!
ಖಾಸಗಿ ಕಾರ್ಯಕ್ರಮಗಳು, ಪೂಜಾ ಸ್ಥಳಗಳು, ಸಾರ್ವಜನಿಕ ಸಾರಿಗೆ, ಮಾರುಕಟ್ಟೆಗಳು, ಪ್ರವಾಸಿ ಸ್ಥಳಗಳು ಹೀಗೆ ಎಲ್ಲವೂ ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಅನುಮತಿಸಿದಾಗ, ಚಿತ್ರಮಂದಿರಗಳು ಮಾತ್ರ ಏಕೆ ಮಾಡಬಾರದು!?” ಎಂದಿದ್ದಾರೆ ಪುನೀತ್ ರಾಜ್ ಕುಮಾರ್.
ಚಿತ್ರಮಂದಿರಕೆ ಮಾತ್ರ ಯಾಕೆ ಕಟ್ಟೆಚ್ಚರ?
ವಿಮಾನದೊಳಗೆ ಭುಜಕ್ಕೆ ಭುಜ ತಾಕಿ ಕೂರಬಹುದು.. ದೇವಸ್ಥಾನದಲ್ಲಿ ಎಲ್ಲರ ಕೈಗಳು ಒಂದೇ ಗಂಟೆ ಬಾರಿಸಬಹುದು.. ಮಾರ್ಕೆಟ್ ನಲ್ಲಿ ಮಾಮುಲಿ ವ್ಯಾಪಾರ ರಾಜಕೀಯ ರ಼್ಯಾಲಿಗೆ ಜನಸಾಗರ ಪಬ್ ಹೋಟೆಲ್ ನಲ್ಲಿ ಎಲ್ಲರ ವಿಹಾರ ಚಿತ್ರಮಂದಿರಕೆ ಮಾತ್ರ ಯಾಕೆ ಕಟ್ಟೆಚ್ಚರ?? ಎಂದು ನಿರ್ದೇಶಕ ಸಿಂಪಲ್ ಸುನಿ ಪ್ರಶ್ನಿಸಿದ್ದಾರೆ.
ಸಿನಿಮಾ ಅನೇಕರಿಗೆ ಜೀವನ
”ಸಿನಿಮಾ ಎನ್ನುವುದು ಅನೇಕರಿಗೆ ಮನರಂಜನೆಯಾಗಿರಬಹುದು, ಆದರೆ ಹಲವರಿಗೆ ಅದು ಜೀವನ” ಎಂದು ಸರ್ಕಾರದ ನಿರ್ಧಾರಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಥಿಯೇಟರ್ ಒಳಗೆ ಮಾತ್ರ ಕೊರೋನಾಗೆ ಅಂಜಿದೊಡೆಂತಯ್ಯ?
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯಾ ? ಊರೆಲ್ಲ ಜನಜಂಗುಳಿ ತುಂಬಿ ತುಳುಕುತಿರಲು Theater ಒಳಗೆ ಮಾತ್ರ ಕೊರೋನಾಗೆ ಅಂಜಿದೊಡೆಂತಯ್ಯ? ಎಂದು ನಟ ಧನಂಜಯ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
100% ಅವಕಾಶ ಕೊಡಿ
ನಟ ಕಂ ನಿರ್ದೇಶಕ ದುನಿಯಾ ವಿಜಯ್ ಹಾಗೂ ಧ್ರುವ ಸರ್ಜಾ ಕೂಡ ಥಿಯೇಟರ್‌ಗೆ 100 ಪರ್ಸೆಂಟ್ ಅವಕಾಶ ಕೊಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.