ಕೇಂದ್ರ ಸರ್ಕಾರ ಚಿತ್ರಮಂದಿರದಲ್ಲಿ ಶೇಕಡ 100ರಷ್ಟು ಆಸನ ವ್ಯವಸ್ಥೆ ಒಪ್ಪಿಗೆ ನೀಡದ್ರೂ, ರಾಜ್ಯ ಸರ್ಕಾರ ಮಾತ್ರ ಶೇಕಡ 50ರಷ್ಟು ಆಸನ ವ್ಯವಸ್ಥೆಗೆ ನಿಯಮ ವಿಧಿಸಿತ್ತು. ಸರ್ಕಾರದ ಈ ನಿಯಮದ ವಿರುದ್ಧ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗುಡುಗಿ ಟ್ವಿಟ್ ಮಾಡಿದ್ರು. ಆ ಬಳಿಕ ಒಟ್ಟಾದ ಗಂಧದಗುಡಿ ಲೀಡರ್ಸ್ ರಾಜ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ರು. ಎಲ್ಲರಿಗೂ ಒಂದು ರೂಲ್ಸ್ ಆದ್ರೆ ಸಿನಿಮಾ ಮಂದಿಗ್ಯಾಕೆ ಈ ನಿಯಮ ಅಂತಾ ಸರ್ಕಾರವನ್ನು ಪ್ರಶ್ನಿಸಿದ್ರು. ಹೀಗೆ ಇಡೀ ಸ್ಯಾಂಡಲ್ ವುಡ್ ಸ್ಟಾರ್ಸ್ ಗುಡುಗುತ್ತಿದ್ದಂತೆ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಸಭೆ ನಡೆಸಿ ನಿಯಮಗಳನ್ನು ವಿಧಿಸಿ 100%ರಷ್ಟು ಆಸನ ವ್ಯವಸ್ಥೆಗೆ ಅನುವು ಮಾಡಿಕೊಟ್ಟರು. ಈ ವಿಚಾರವಾಗಿ ಧ್ರುವ ಸರ್ಜಾ ಟ್ವಿಟರ್ ನಲ್ಲಿ ವಿಡಿಯೋ ಹಂಚಿಕೊಂಡು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ರಿಲೀಸ್ ಗೆ ರೆಡಿ ಇರುವ ಎಲ್ಲಾ ಸಿನಿಮಾಗಳನ್ನು ಸಿನಿಮಾ ಪ್ರೇಮಿಗಳು ನೋಡಿ ಕನ್ನಡ ಚಿತ್ರರಂಗಕ್ಕೆ ಒಳ್ಳೆಯದು ಮಾಡಿ ಅಂತಾ ಸಿನಿಪ್ರೇಮಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಂದಹಾಗೇ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಸಿನಿಮಾ ಪೊಗರು ಇದೇ ತಿಂಗಳ 19ರಂದು ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್ ಆಗ್ತಿದೆ.