- Advertisement -
ಬೆಂಗಳೂರು : ನಿಮ್ಮ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ಹೊಸ ಕಚೇರಿಯಲ್ಲಿ ಕಾರ್ಯಾರಂಭ ಮಾಡಿತು.. ಡಿಸಿಎಂ ಅಶ್ವತ್ಥ್ ನಾರಾಯಣ್ ಕಾರ್ಯಕ್ರಮಕ್ಕೆ ಆಗಮಿಸಿ ಕರ್ನಾಟಕ ಟಿವಿಯ ಸಂಪಾದಕರಾದ ಶಿವಕುಮಾರ್ ತಂಡಕ್ಕೆ ಶುಭ ಕೋರಿದ್ರು..

ಇಂದಿನ ಮಾಧ್ಯಮ ಜಗತ್ತು ಬದಲಾವಣೆ ಕಡೆ ಮುಖ ಮಾಡ್ತಿದೆ. ಇಂಥಹ ಸಂದರ್ಭದಲ್ಲಿ ಹಿರಿಯ & ಕಿರಿಯ ಪತ್ರಕರ್ತರು ಡಿಜಿಟಲ್ ಮಾಧ್ಯಮದ ಕಡೆ ಹೆಜ್ಜೆ ಹಾಕುತ್ತಿರುವುದು ಒಳ್ಳೆಯ ಬೆಳವಣಿಗೆ.. ಹಾಗೆಯೇ ಜನ ಇಂಟರ್ ನೆಟ್ ಕ್ರಾಂತಿಯಿಂದಾಗಿ ಮೊಬೈಲ್ ಬಳಕೆ ಹೆಚ್ಚಾಗಿ ಮಾಡುತ್ತಿದ್ದಾರೆ.. ಈ ಹಿನ್ನೆಲೆ ಜನರನ್ನ ತಲುಪಲು ಡಿಜಿಟಲ್ ಮಾಧ್ಯಮದ ಸುಲಭ ವಿಧಾನ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ರು..

ಇದೇ ವೇಳೆ ಶಿವಕುಮಾರ್ & ತಂಡದ ಕಾರ್ಯವನ್ನ ಶ್ಲಾಘಿಸಿದ ಡಿಸಿಎಂ ಡಾ ಅಶ್ವಥ್ ನಾರಾಯಣ್ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದ್ರು..
- Advertisement -