ಒಂಟಿ ಮನೆಯಲ್ಲಿ ಮೂರೇ ದಿನದಲ್ಲಿಯೇ ಸ್ಪರ್ಧಿಗಳ ನಡುವೆ ಈಗ ವಾರ್ ಶುರುವಾಗಿದೆ. ಅದ್ರಲ್ಲೂ ಕ್ಯಾಪ್ಟನ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ರೇಗಾಡಿದ್ದಾರೆ. ಬ್ರೋ ಗೌಡ ವಿರುದ್ಧ ಹಾಗೂ ಪ್ರಶಾಂತ್ ಸಂಬರ್ಗಿ ನಡುವೆ ವೈಮಮಸ್ಸು ಏರ್ಪಟ್ಟಿದೆ.
ಮೂರನೇ ದಿನದಂದು ಒಂಟಿ ಮನೆಯ ಎಲ್ಲಾ ಸ್ಪರ್ಧಿಗಳು ಒಟ್ಟಿಗೆ ಕುಳಿತು ಕಾಲ ಕಳೆಯುತ್ತಿದ್ದರು. ಈ ವೇಳೆ ದಿವ್ಯಾಉರುಡುಗ ಜೊತೆ ಪ್ರಶಾಂತ್ ಸಂಬರ್ಗಿ ಹೆಜ್ಜೆ ಹಾಕಿದ್ರು. ಅದಕ್ಕೂ ಮುನ್ನ ಆ್ಯಕ್ಷನ್ ಅಂತಾ ಸ್ಪರ್ಧಿಯೊಬ್ಬರು ಹೇಳ್ತಾರೆ. ಅದಕ್ಕೆ ಬ್ರೋ ಗೌಡ ಓವರ್ ರಿಯಾಕ್ಷನ್ ಅಂತಾರೇ. ಇಷ್ಟೂ ಹೇಳಿದ್ದೇ ತಡ ಬ್ರೋ ಗೌಡ ವಿರುದ್ಧ ಪ್ರಶಾಂತ್ ಕೆಂಡಾವಾಗ್ತಾರೆ.
ಬ್ರೋ ಗೌಡ ಮೇಲೆ ಕೋಪಿಸಿಕೊಂಡ ಸಂಬರ್ಗಿ ಕ್ಯಾಪ್ಟನ್ ಹೇಗೆ ಇರಬೇಕು ಅಂತಾ ಮೊದ್ಲೇ ಹೇಳಿದ್ದೇ. ಆಗೇ ಹೀಗೇ ಅಂತಾರೇ. ಅದಕ್ಕೆ ಸುಮ್ಮನಾಗದ ಬ್ರೋ ಗೌಡ ನಾನು ಫನ್ ಗಾಗಿ ಮಾಡಿದ್ದು. ನನಗೆ ಕ್ಯಾಪ್ಟನ್ ಅನ್ನೋ ದೌವಲತ್ತು ಇಲ್ಲ ಅಂತಾರೇ. ಈ ವೇಳೆ ಜೊತೆಯಲ್ಲಿದ್ದ ಗೀತಾ ಭಾರತಿ ಭಟ್ ಬ್ರೋ ಗೌಡ ಕಂಟ್ರೋಲ್ ಮಾಡಿದ್ರು ಆತನಿಗೆ ಸಿಟ್ಟು ನೆತ್ತಿಗೇರಿರುತ್ತದೆ. ಬಳಿಕ ಬ್ರೋ ಗೌಡ ವಿಶ್ವನಾಥ್ ಹಾಗೂ ಗೀತಾ ಜೊತೆ ಆತ ನಾನು ಸುಮ್ಮನಿದ್ರೆ ಮತ್ತೊಂದು ಹೇಳ್ತಾನೆ ಅಂತಾ ಹೇಳಿದ್ದಾರೆ. ಸದ್ಯ ರಿಲೀಸ್ ಆಗಿರುವ ಮೂರನೇ ದಿನ ಪ್ರಮೋದಲ್ಲಿ ಬ್ರೋ ಗೌಡ ವರ್ಸಸ್ ಪ್ರಶಾಂತ್ ಸಂಬರ್ಗಿ ನಡುವೆ ವಾರ್ ಶುರುವಾಗಿರೋದು ಗೊತ್ತಾಗುತ್ತಿದೆ.