ಸಾಧಾರಣವಾಗಿ ಮನೆಯಲ್ಲಿ ಪತ್ನಿಗಿಂತ ಪತಿಯ ಪ್ರಾಬಲ್ಯ ಹೆಚ್ಚಿರುತ್ತದೆ. ಆದ್ರೆ ಕೆಲ ಮನೆಗಳಲ್ಲಿ ಪತ್ನಿಯೇ ಪತಿಗಿಂತ ಪ್ರಾಬಲ್ಯಳಾಗಿರುತ್ತಾರೆ. ಅಂಥ ಮನೆಯಲ್ಲಿ ಪತ್ನಿಯ ಮಾತೇ ಶಾಸನವಾಗಿರುತ್ತದೆ. ಹೀಗೆ ಪತ್ನಿಯ ಮಾತಿನಂತೆ ನಡೆಯುವ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ.
ಸಿಂಹ: ಸಿಂಹ ಎಂದರೇನೇ ನಾಯಕತ್ವದ ಚಿಹ್ನೆ. ಈ ರಾಶಿಯವರು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಈ ರಾಶಿಯವರು ನೇರ ನುಡಿಯವರು, ಉತ್ತಮ ಸ್ವಭಾವದವರು. ಆದರೂ ಕೂಡ ಪತ್ನಿಗೆ ಗೌರವ ನೀಡುವ, ಪ್ರೀತಿಸುವ, ನಂಬಿಕಸ್ಥ ಪತಿಯಾಗಿರ್ತಾರೆ. ಅಷ್ಟು ಸುಲಭವಾಗಿ ಯಾರ ಮಾತನ್ನು ಕೇಳದ ಇವರು ಪತ್ನಿಗೆ ಇಷ್ಟವಾಗದ ಕೆಲಸವನ್ನು ಮಾಡುವುದಿಲ್ಲ.
ಮಕರ: ಮಕರ ರಾಶಿಯವರು ಹಠಮಾರಿ ಸ್ವಭಾವದವರು. ಸಿಟ್ಟಿನ ಸ್ವಭಾವದವರು, ಆದ್ರೆ ಪತ್ನಿಯನ್ನು ಪ್ರೀತಿ, ಕಾಳಜಿಯಿಂದ ಕಾಣುತ್ತಾರೆ. ಪತ್ನಿಯನ್ನು ಗೌರವದಿಂದ ಕಾಣುತ್ತಾರೆ. ವಿವಾಹದ ಮುನ್ನ ಹೆಚ್ಚಿನ ಸಿಟ್ಟಿನ ಸ್ವಭಾವವನ್ನು ಹೊಂದಿದ ಇವರು, ವಿವಾಹದ ನಂತರ ತಾಳ್ಮೆ ತಂದುಕೊಳ್ಳುತ್ತಾರೆ. ಈ ಕಾರಣಕ್ಕೆ ಅವರ ವೈವಾಹಿಕ ಜೀವನ ಉತ್ತಮವಾಗಿರುತ್ತದೆ.
ಕುಂಭ: ಕುಂಭ ರಾಶಿಯವರು ಹಠಮಾರಿ ಸ್ವಭಾವದವರಾದ್ರೂ, ತಮ್ಮ ವೈವಾಹಿಕ ಜೀವನವನ್ನು ಉತ್ತಮವಾಗಿರಿಸಲು ಬಯಸುತ್ತಾರೆ. ತಮ್ಮ ಸಂಗಾತಿಯ ಸ್ವಭಾವ ವಿರುದ್ಧವಾಗಿದ್ದರೆ, ಬುದ್ಧಿ ಹೇಳಿ ಅವರನ್ನು ತಿದ್ದಲು ಪ್ರಯತ್ನಿಸುತ್ತಾರೆ. ಸಂಗಾತಿಯ ಕೋಪಗೊಂಡರೆ, ಅವರನ್ನು ಸಮಾಧಾನಿಸುವ ಪರಿಯನ್ನು ಕೂಡ ಇವರು ಅರಿತುಕೊಂಡಿರುತ್ತಾರೆ.
ಮೀನ: ಮೀನ ರಾಶಿಯವರು ಮೌನದ ಸ್ವಭಾವದವರಾಗಿರುತ್ತಾರೆ. ಆದ್ರೆ ಸಂಗಾತಿಗೆ ತಮ್ಮ ಜೀವನದ ಎಲ್ಲ ವಿಷಯವನ್ನೂ ಹೇಳುತ್ತಾರೆ ಮತ್ತು ನಿಯತ್ತಾಗಿರುತ್ತಾರೆ. ಹೀಗಾಗಿಯೇ ಇವರ ವೈವಾಹಿಕ ಜೀವನ ಉತ್ತಮವಾಗಿರುತ್ತದೆ ಅಂತಾ ಹೇಳಬಹುದು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬದುಕುವ ಪ್ರಯತ್ನ ಮಾಡುವ ಇವರು, ಪತ್ನಿಯನ್ನ ಪ್ರೀತಿ, ಕಾಳಜಿ, ಗೌರವದಿಂದ ಕಾಣುತ್ತಾರೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




