Chanakya Neeti: ಈ ಪ್ರಪಂಚದಲ್ಲಿ ಹೆಚ್ಚು ಬೆಲೆಬಾಳುವ ವಸ್ತು ಅಂದ್ರೆ ಅದು ವಜ್ರ. ಹಾಗಾಗಿಯೇ ಶ್ರೀಮಂತ ಮನೆಯ ಹೆಣ್ಣು ಮಕ್ಕಳು ವಜ್ರದ ನೆಕ್ಲೇಸ್ ಬಗ್ಗೆ ಅಷ್ಟು ಆಸೆ ಇಡೋದು. ಆದ್ರೆ ಚಾಣಕ್ಯರು ವಜ್ರಕ್ಕಿಂತಲೂ ಮನುಷ್ಯನ ಜೀವನದಲ್ಲಿ ಬೆಲೆಬಾಳುವ ಮೂರು ವಸ್ತುಗಳಿದೆ ಅಂತಾರೆ. ಹಾಗಾದ್ರೆ ಯಾವುದು ಆ ಮೂರು ವಸ್ತು ಅಥವಾ ಸಂಗತಿ ಅಂತಾ ತಿಳಿಯೋಣ ಬನ್ನಿ..
ನೀರು: ಚಾಣಕ್ಯರ ಪ್ರಕಾರ, ಭೂಮಿಯಲ್ಲಿ ನೀರು ಇಲ್ಲದಿದ್ದರೆ, ಯಾವ ಜಲರಾಶಿಗಳು ಬದುಕಲು ಸಾಧ್ಯವೇ ಇಲ್ಲ. ಹಾಗಾಗಿ ನೀರು ವಜ್ರಕ್ಕಿಂತೂ ಬೆಲೆಬಾಳುವ ವಸ್ತು. ಹಾಗಾಗಿ ನೀರನ್ನು ಬಹಳ ಜಾಗರೂಕತೆಯಿಂದ ಬಳಸಬೇಕು ಅಂತಾರೆ ಚಾಣಕ್ಯರು. ನಾವು ನೀರನ್ನು ಮಿತವಾಗಿ ಬಳಸಿ, ಉಳಿಸುತ್ತೆವೋ, ಅಷ್ಟು ಮುಂದಿನ ಪೀಳಿಗೆಯ ಭವಿಷ್ಯ ಉತ್ತಮವಾಗಿರುತ್ತದೆ ಅಂತಾರೆ ಚಾಣಕ್ಯರು.
ಆಹಾರ: ವಜ್ರವಿಲ್ಲದೇ ಬದುಕಬಹುದು. ಆಹಾರವಿಲ್ಲದೇ ಬದುಕಬಲ್ಲೀರಾ..? ಖಂಡಿತವಾಗಿಯೂ ಸಾಧ್ಯವಿಲ್ಲ. ಹಾಗಾಗಿ ವಜ್ರಕ್ಕಿಂತ ಬೆಲೆಬಾಳುವಂಥದ್ದು ಆಹಾರ ಅಂತಾರೆ ಚಾಣಕ್ಯರು. ಅಗತ್ಯಕ್ಕಿಂತ ಹೆಚ್ಚು ಸೇವಿಸುವುದು. ಅಥವಾ ಆಹಾರ ವ್ಯರ್ಥ ಮಾಡುವುದೆಲ್ಲ ಮಹಾ ಪಾಪ ಎಂದೇ ಹೇಳಲಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ತಿಂದರೆ, ರೋಗ ಬರುತ್ತದೆ. ವ್ಯರ್ಥ ಮಾಡಿದರೆ, ಅದರ ಕರ್ಮಫಲ ನಮ್ಮನ್ನು ಕಾಡುತ್ತದೆ. ಹಾಗಾಗಿ ಆಹಾರವನ್ನು ಮಿತವಾಗಿ ಸೇವಿಸಿ, ಮತ್ತು ದಾನ ಮಾಡುವುದನ್ನು ಕಲಿಯಿರಿ ಎನ್ನುತ್ತಾರೆ ಚಾಣಕ್ಯರು.
ಉತ್ತಮ ಮಾತು:ಚಾಣಕ್ಯರ ಪ್ರಕಾರ ವಜ್ರಕ್ಕಿಂತ ಬೆಲೆ ಬಾಳುವ ಸಂಗತಿ ಅಂದ್ರೆ ಅದು ನಮ್ಮ ಹಿತವಾದ ಮಾತು. ನಾವು ಎಷ್ಟಾಗತ್ತೋ ಅಷ್ಟು ಮಧುರವಾಗಿ ಮಾತನಾಡಬೇಕು ಅಂತಾರೆ ಚಾಣಕ್ಯರು. ಮತ್ತು ಆ ಮಧುರವಾದ ಮಾತು ಮನಸ್ಸಿನಿಂದ ಬರಬೇಕೇ ವಿನಃ ಬಾಯಿಯಿಂದ ಅಲ್ಲ. ಯಾರ ಜತೆಗಾದರೂ ಮಾತನಾಡುವಾಗ ನಾವು ತಾಳ್ಮೆಯಿಂದ ವರ್ತಿಸಬೇಕು. ತಾಳ್ಮೆಯಿಂದ ಮಾತನಾಡಬೇಕು. ಆಗಲೇ ನಮಗೆ ಬೆಲೆ ಸಿಗುತ್ತದೆ. ಮತ್ತು ನಮ್ಮ ಜೀವನ ಅಭಿವೃದ್ಧಿಯಾಗುತ್ತದೆ ಅಂತಾರೆ ಚಾಣಕ್ಯರು.




