ಬೆಂಗಳೂರು : ಮುಖ್ಯಮಂತ್ರಿ ಕುಮಾರಸ್ವಾಮಿ ಮೇ 23ಕ್ಕೆ ಮಂಡ್ಯ ಜನ ತೀರ್ಪು ಕೊಡ್ತಾರೆ ನಿಮಗೆ ಅಂದು ಗೊತ್ತಾಗುತ್ತೆ ಅಂತ ಫಲಿತಾಂಶಕ್ಕೂ ಮೊದಲು ಮಾಧ್ಯಮಗಳಿಗೆ ಎಚ್ಚರಿಕೆ ಕೊಡುವ ರೀತಿ ಮಾತನಾಡಿದ್ರು. ಯಾಕಂದ್ರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೋದಿಗಿಂತ ಹೆಚ್ಚಾಗಿ ಸುಮಲತಾರನ್ನ ತೋರಿಸಿ ಮಂಡ್ಯದಲ್ಲಿ ಜೆಡಿಎಸ್ ವಿರುದ್ಧ ಅಲೆಯನ್ನ ಮಾಧ್ಯಮಗಳು ನಿರ್ಮಾಣ ಮಾಡಿವೆ ಅನ್ನೋದು ಕುಮಾರಸ್ವಾಮಿ ಕೋಪಕ್ಕೆ ಕಾರಣವಾಗಿತ್ತು.. ಈಗ ಫಲಿತಾಂಶದಲ್ಲೂ ನಿಖಿಲ್ ವಿರುದ್ಧ ಸುಮಲತಾ ಅಂಬರೀಶ್ ಭರ್ಜರಿ ಜಯ ದಾಖಲಿಸಿದ್ದಾರೆ..
ಇದಲ್ಲದೆ ಫಲಿತಾಂಶಕ್ಕೂ ಮೊದಲು ಮೀಸೆ ತಿರುವಿದ್ದ ಜೆಡಿಎಸ್ ಸಚಿವರು, ಶಾಸಕರು ಮುಖಂಡರಿಗೆ ಈಗ ಮುಖ ತೋರಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಡ್ಯ ಉಸ್ತುವಾರಿ ಸಚಿವ ಪುಟ್ಟರಾಜು ಅವರು ನಿಖಿಲ್ ಎರಡೂವರೆ ಲಕ್ಷ ಅಂತರದಲ್ಲಿ ನಿಖಿಲ್ ಗೆಲ್ಲದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಅಂತ ಹೇಳಿದ್ತು.. ಇದೀಗ ಎರಡೂವರೆ ಲಕ್ಷ ಲೀಡ್ ಗಿಂತ ಒಂದುಕಾಲು ಲಕ್ಷ ಲೀಡ್ ನಲ್ಲಿ ಸುಮಲತಾ ಗೆದ್ದಿದ್ದಾರೆ. ಇಷ್ಟೆ ಅಲ್ಲ ಸ್ವತಃ ಪುಟ್ಟರಾಜು ಕ್ಷೇತ್ರದಲ್ಲಿ ಸುಮಲತಾ ಭರ್ಜರಿ ಲೀಡ್ ತೆಗರದುಕೊಂಡಿದ್ದಾರೆ. ಇನ್ನು ಕುಮಾರಸ್ವಾಮಿ ಅಣ್ಣ ರೇವಣ್ಣ ಮೋದಿ ಮತ್ತೆ ಪ್ರಧಾನಿಯಾದ್ರೆ ರಾಜಕೀಯ ನಿವೃತ್ತಿ ತೆಗೆದುಕೊಳ್ತೀನಿ ಅಂತ ಹೇಳಿದ ಬೆನ್ನಲ್ಲೆ ಇದೀಗ ಮೋದಿ ಭಾರೀ ಬಹುಮತದಿಂದ ಮತ್ತೆ ಆಯ್ಕೆಯಾಗಿದ್ದಾರೆ. ಈಗ ರೇವಣ್ಣ ರಾಜಕೀಯ ನಿವೃತ್ತಿ ಯಾವಾಗ ಅಂತ ಮಾಧ್ಯಮದವರು ಬೆನ್ನು ಬಿದ್ದಿದ್ದಾರೆ.
ಇನ್ನು ಕುಮಾರಸ್ವಾಮಿ ನಾನು ಮಾಧ್ಯಮದವರ ಮುಂದೆ ಮಾತನಾಡಲ್ಲ ಅಂತ ಶಪಥ ಮಾಡಿದ್ದಾರೆ. ಇದೆಲ್ಲದ್ದಕ್ಕಿಂತ ಕೆಲ ಜೆಡಿಎಸ್ ನಾಯಕರು ನಾಲಗೆ ಹರಿಬಿಟ್ರೆ ಎಲ್ಲಿ ದೋಸ್ತಿ ಸರ್ಕಾರಕ್ಕೆ ಸಂಚಕಾರ ಬರುತ್ತೋ ಅಂತ ಕುಮಾರಸ್ವಾಮಿ ಆದೇಶದ ಮೇರೆಗೆ ಯಾವೊಬ್ಬ ಜೆಡಿಎಸ್ ಮುಖಂಡರು ಟಿವಿ ಹಾಗೂ ಪತ್ರಿಕಾ ಮಾಧ್ಯಮದವರ ಮುಂದೆ ಮಾತನಾಡದಂತೆ ಪಕ್ಷದ ವತಿಯಿಂದ ಕಟ್ಟಾಜ್ಞೆ ಹೊರಡಿಸಿದ್ದಾರೆ.. ಕುಮಾರಸ್ವಾಮಿ ಈ ಹಿಂದೆಯೂ ಮಾಧ್ಯಮದ ಮುಂದೆ ಮಾತನಾಡಲ್ಲ ಅಂತ ಹೇಳಿ ಅವರೇ ಮತ್ತೆ ಮಾಧ್ಯಮದ ಮುಂದೆ ಬಂದಿದ್ರು.. ಇದೀಗ ಮತ್ತೆ ಮುನಿಸು ಶುರುವಾಗಿದೆ.. ಈ ಮುನಿಸು ಎಲ್ಲಿಯ ವರೆಗೆ ಅನ್ನೋದು ಶೀಘ್ರವೇ ಗೊತ್ತಾಗಲಿದೆ.. ಯಾಕಂದ್ರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸರ್ಕಾರ ರಚನೆಗೆ ಆಪರೇಷನ್ ಕಮಲ ಮಾಡುವಾಗಲಾದರೂ ಆ ಬಗ್ಗೆ ಜೆಡಿಎಸ್ ನಾಯಕರು ಬಂದು ಮಾಧ್ಯಮಗಳ ಮುಂದೆ ನಿಲ್ತಾರೆ ಅನ್ನೋ ಸಾಮಾನ್ಯ ಜನರ ಮಾತು..