ದೊಡ್ಮನೆಯಲ್ಲಿ ಮಂಜು ಪಾವಗಡ ಮಾಡೆಲ್ ದಿವ್ಯಾ ಸುರೇಶ್ ಹೃದಯ ಕದ್ದಿದ್ದಾರೆ. ಮೊದಲ ದಿನದಿಂದಲ್ಲೂ ದಿವ್ಯಾ ಹಿಂದೆ ಹಿಂದೆ ಸುತ್ತುತ್ತ ಮೈಕ್ ಬದಲಿಸಿ ಮದ್ವೆ ಕೂಡ ಆಗಿದ್ದಾರೆ. ದಿವ್ಯಾ ಕೂಡ ಮಂಜು ತುಂಟಾಟ ಸಹಿಸಿಕೊಂಡು ಸಖತ್ ಖುಷಿಪಡ್ತಾರೆ. ಈ ನಡುವೆ ಬ್ರೋ ಗೌಡಗೂ ದಿವ್ಯಾ ಮೇಲೆ ಲವ್ ಆಗಿತ್ತಂತೆ. ಬಟ್ ಆ ಲವ್ ಟೇಕ್ ಆಫ್ ಆಗುವ ಮುನ್ನವೇ ಕ್ರ್ಯಾಶ್ ಆಗಿದೆಯಂತೆ. ನನ್ನ ಪ್ರೀತಿ ಎಂಬ ಟೈಟಾನಿಕ್ ಶಿಪ್ ಗೆ ದೊಡ್ಡ ಬಂಡೆ ಕಲ್ಲಾಗಿ ಮಂಜು ಪಾವಗಡ ಬಂದು ಹೊಡೆದಿದ್ದಾರೆ ಅಂತಾ ಬ್ರೋ ಗೌಡ ಹೇಳಿದ್ರು.

ಈ ಲವ್ ಸ್ಟೋರಿಗಳ ನಡುವೆ ದಿವ್ಯಾ ಮೇಲೆ ಮತ್ತೊಬ್ಬ ಸ್ಪರ್ಧಿಗೂ ಲವ್ ಆಗಿದೆಯಂತೆ. ಅವರೇ ಅರವಿಂದ್. ಒಂಟಿ ಮನೆಯೊಳಗೆ ಎಂಟ್ರಿ ಕೊಡುವ ಮೊದಲು ಹೂ ಗುಚ್ಚವನ್ನು ನೀಡಿ ಇಷ್ಟವಾದವರಿಗೆ ಕೊಡುವಂತೆ ಹೇಳಲಾಗಿತ್ತು. ಅದರಂತೆ ಅರವಿಂದ್ ತಮ್ಮ ಕ್ರಶ್ ದಿವ್ಯಾಗೆ ಹೂಗುಚ್ಛ ನೀಡಿದ್ರು. ಈ ಬಗ್ಗೆ ಕಿಚ್ಚ ಸುದೀಪ್, ಹೂಗುಚ್ಛ ನೀಡಿದ ಬಳಿಕ ಏನಾಯಿತು ಎಂದು ಅರವಿಂದ್ ಕೇಳುತ್ತಾರೆ. ಅರವಿಂದ್, ಮಂಜು ಹಾರಿಸಿಕೊಂಡು ಹೋದರು ಎಂದು ತಮಾಷೆ ಮಾಡಿದ್ದಾರೆ.
ಒಟ್ನಲ್ಲಿ ಬಿಗ್ ಮನೆಯಲ್ಲಿ ಸಖತ್ ಮಜವಾದ ಲವ್ ಸ್ಟೋರಿ ನಡೆಯುತ್ತಿದ್ದು, ಇದು ಎಲ್ಲಿಗೆ ಮುಟ್ಟುತ್ತೋ ಕಾದು ನೋಡ್ಬೇಕು




