ಹೋಳಿಹಬ್ಬವನ್ನು ಯಾಕೆ ಆಚರಿಸಲಾಗುತ್ತದೆ..? ಈ ಬಗ್ಗೆ ಇಲ್ಲಿದೆ ನೋಡಿ 3 ಕಥೆ..!

ಹಿಂದೂಗಳಲ್ಲಿರುವ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ವಿಶೇಷತೆ ಇದೆ. ಅದೇ ರೀತಿ ಹಬ್ಬಗಳನ್ನು ಆಚರಿಸುವ ಹಿಂದೆ ಕಥೆಗಳೂ ಇದೆ. ಅಂಥ ವಿಶೇಷತೆ ಹೊಂದಿರುವ, ಕಥೆಗಳನ್ನು ಹೊಂದಿರುವ ಒಂದು ಹಬ್ಬ ಹೋಳಿ ಹಬ್ಬ. ಬಣ್ಣದೋಕುಳಿಯನ್ನು ಚೆಲ್ಲಿ ಸಂಭ್ರಮಿಸುವ ಈ ಹಬ್ಬದ ಹಿಂದಿರುವ 3 ಕಥೆಗಳ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮೊದಲನೇಯದಾಗಿ ರತಿ ಮನ್ಮಥನ ಕಥೆ. ಓರ್ವ ರಾಕ್ಷಸ ಸಂಹಾರವಾಗಬೇಕಾದ್ರೆ, ಕಾರ್ತಿಕೇಯನ ಜನ್ಮವಾಗಬೇಕಾಗಿರುತ್ತದೆ. ಹಾಗಾಗಿ ಶಿವ- ಪಾರ್ವತಿ ಒಂದಾಗಬೇಕಾಗುತ್ತದೆ. ಆದ್ರೆ ಸತಿಯನ್ನ ಕಳೆದುಕೊಂಡ ದುಃಖದಲ್ಲಿದ್ದ ಶಿವ ಗಾಢ ತಪಸ್ಸಿನಲ್ಲಿ ಮಗ್ನನಾಗಿ ಬಿಡುತ್ತಾನೆ. ಆದ್ರೆ ಅಗ್ನಿಗೆ ಆಹುತಿಯಾಗಿದ್ದ ಸತಿ, ಪುನಃ ಗೌರಿಯ ರೂಪ ತಾಳಿರುತ್ತಾಳೆ. ಆ ಗೌರಿ ಮತ್ತು ಶಿವನ ಸಮಾಗಮಕ್ಕಾಗಿ ದೇವತೆಗಳು ಮನ್ಮಥನ ಸಹಾಯ ಪಡೆಯುತ್ತಾರೆ.

ಆಗ ಮನ್ಮಥ ತನ್ನ ಬಳಿ ಇರುವ ಕಾಮ ಬಾಣವನ್ನು ಶಿವನೆಡೆಗೆ ಬಿಟ್ಟು, ಅವನಿಗೆ ಗೌರಿಯ ಮೇಲೆ ಮನಸ್ಸಾಗುವಂತೆ ಮಾಡಲು ಪ್ರಯತ್ನಿಸುತ್ತಾನೆ. ಈ ವೇಳೆ ಶಿವ ಮೂರನೇ ಕಣ್ಣು ತೆರೆದಾಗ, ಮನ್ಮಥ ಸುಟ್ಟು ಭಸ್ಮವಾಗುತ್ತಾನೆ. ಹೀಗೆ ಸುಟ್ಟು ಭಸ್ಮವಾದ ಮನ್ಮಥನೇ ಕಾಮದೇವ. ಇದೇ ಕಾಮದೇವನನ್ನು ಹೋಳಿ ಹುಣ್ಣಿಮೆಯ ದಿನ ಸುಡಲಾಗುತ್ತದೆ. ಅದಕ್ಕೂ ಮುನ್ನ ಪೂಜಿಸಲಾಗುತ್ತದೆ. ನಂತರ ಪ್ರಸಾದವನ್ನು ಹಂಚಿ, ಬಣ್ಣ ಎರಚಿ ಹೋಳಿ ಹಬ್ಬ ಮಾಡಲಾಗುತ್ತದೆ.

ಎರಡನೇಯದಾಗಿ ಹೋಲಿಕಾ ದಹನ. ವಿಷ್ಣುವಿನ ಪರಮ ಭಕ್ತನಾಗಿದ್ದ ಪ್ರಹ್ಲಾದನು ತನ್ನ ಅಪ್ಪನಾದ ಹಿರಣ್ಯ ಕಶ್ಯಪುವಿನ ಮಾತು ಕೇಳದೇ, ಹರಿನಾಮಸ್ಮರಣೆ ಮಾಡುತ್ತಿದ್ದನು. ತನ್ನ ಮಾತು ಕೇಳದ ಮಗನನ್ನು ಕೊಲ್ಲಬೇಕೆಂದು ನಿರ್ಧರಿಸಿದ ಹಿರಣ್ಯ ಕಶಪು, ತಂಗಿ ಹೋಲಿಕಾಳನ್ನು ಕರೆಸಿ, ಆಕೆಯ ತೊಡೆಯ ಮೇಲೆ ಪ್ರಹ್ಲಾದನನ್ನು ಕೂರಿಸಿಕೊಳ್ಳಲು ಹೇಳಿದನು. ಏಕೆಂದರೆ, ಆಕೆಯ ತೊಡೆಯ ಮೇಲೆ ಆಸೀನರಾದವರು, ಬೆಂಕಿಯಲ್ಲಿ ಸುಟ್ಟು ಬೂದಿಯಾಗುವ ವರ ಆಕೆಗಿತ್ತು.

ಆದ್ರೆ ಪ್ರಹ್ಲಾದ ಹರಿನಾಮಸ್ಮರಣೆ ಮಾಡುತ್ತಲೇ, ಹೋಲಿಕಾಳ ತೊಡೆಯ ಮೇಲೆ ಕುಳಿತನು. ಈ ವೇಳೆ ಹೋಲಿಕಾ ಬೆಂಕಿಯಲ್ಲಿ ಸುಟ್ಟು ಹೋದಳು. ಆದ್ರೆ ಪ್ರಹ್ಲಾದ ಬದುಕಿ ಬಂದ. ಹಾಗಾಗಿ ಈ ದಿನ ಹೋಲಿಕಾ ದಹನವನ್ನು ಆಚರಿಸಿ, ಬಣ್ಣ ಎರಚಿ ಸಂಭ್ರಮಿಸಲಾಗುತ್ತದೆ.

ಮೂರನೇಯದಾಗಿ ಕೃಷ್ಣನ ಸಂಹಾರಕ್ಕೆಂದು ಬಂದ ಪೂತನಿಯ ಮೊಲೆಯನ್ನು ಕಚ್ಚಿ, ಶ್ರೀಕೃಷ್ಣ ಆಕೆಗೆ ಮುಕ್ತಿ ಕೊಟ್ಟನು. ಹೀಗಾಗಿ ದುಷ್ಟಸಂಹಾರದ ದಿನ ಎಂದು ಹೋಲಿ ಹಬ್ಬ ಆಚರಿಸಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author